ಪುಣೆ: ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ್ ತಿಲಕ್ ಅವರನ್ನು ಭಯೋತ್ಪಾದನೆಯ ಪಿತಾಮಹ ಎಂದು ಪುಸ್ತಕದಲ್ಲಿ ಮುದ್ರಿಸುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ ಎಂದು ಪುಣೆ ಮೇಯರ್ ಮುಕ್ತ ತಿಲಕ್ ಹೇಳಿದ್ದಾರೆ.
8ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ,ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ್ ತಿಲಕ್ ಅವರನ್ನು ಭಯೋತ್ಪಾದನೆ. ತಂದೆ ಮುದ್ರಿಸಲಾಗಿದೆ. ತಿಲಕ್ ಅವರು ದೇಶಕ್ಕಾಗಿ ಹೋರಾಡಿದ ಮಹಾನ್ ಪುರುಷರು, ಅವರನ್ನು ಈ ರೀತಿ ಬಿಂಬಿಸಿರುವುದು ಅವರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.
ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರ ಮೊಮ್ಮಗ ಶೈಲೇಶ್ ತಿಲಕ್ ಅವರ ಪತ್ನಿಯಾಗಿರುವ ಮುಕ್ತ, ತಿಲಕ್ ಅವರು ಸುಮಾರು 50 ವರ್ಷ ದೇಶಕ್ಕಾಗಿ ಹೋರಾಡಿದ್ದಾರೆ, ದೇಶಕ್ಕಾಗಿ ಹೋರಾಟ ಮಾಡಿದ ಅವರನ್ನು ಭಯೋತ್ಪಾದಕ ಎಂದು ಕರೆದಿರುವವರ ವಿರುದ್ಧ ಕೇಸು ದಾಖಲಿಸುವಂತೆ ಸೂಚಿಸಿದ್ದಾರೆ, ಜೊತೆಗೆ ಎಲ್ಲಾ ನಾಗರಿಕರು ಈ ಪುಸ್ತಕವನ್ನು ನಿಷೇಧಿಸಬೇಕು ಎಂದು ಕರೆ ನೀಡಿದ್ದಾರೆ.
ರಾಜಸ್ತಾನ ಪ್ರೌಢ ಶಿಕ್ಷಣ ಮಂಡಳಿ ಈ ಪುಸ್ತಕ ಪ್ರಕಟಿಸಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೇ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮುಕ್ತ ತಿಲಕ್ ಹೇಳಿದ್ದಾರೆ.