ಮುಂಬೈ: ಮುಂಬೈನ ಮಹಾಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಭಾರತೀಯ ಯೋಧನೊರ್ವ ರಕ್ಷಿಸಿದ್ದಾರೆ.
ಬಾಲಕಿಯ ಪೋಷಕರು ಓಡಿ ಬಂದು ರೈಲನ್ನು ಏರಿದ್ದಾರೆ. ಈ ವೇಳೆ ಬಾಲಕಿ ಸಹ ರೈಲು ಹತ್ತಬೇಕು ಅಷ್ಟರಲ್ಲ ರೈಲು ಮುಂದಕ್ಕೆ ಚಲಿಸಿತ್ತು. ನಿಯಂತ್ರಣ ತಪ್ಪಿದ ಬಾಲಕಿ ಇನ್ನೇನು ರೈಲಿನಡಿ ಸಿಲುಕಬೇಕು ಅಷ್ಟರಲ್ಲೇ ಮಹಾರಾಷ್ಟ್ರದ ಭದ್ರತಾ ಪಡೆಯ ಯೋಧ ಸಚಿನ್ ಪೋಲ್ ಬಾಲಕಿಯನ್ನು ರಕ್ಷಿಸಿ ಸಾಹಸ ಮೆರೆದಿದ್ದಾರೆ.
ಯೋಧ ಸಚಿನ್ ಪೋಲ್ ಬಾಲಕಿಯನ್ನು ರಕ್ಷಿಸಿರುವ ವಿಡಿಯೋ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.