ಸುನಂದಾ ಪುಷ್ಕರ್, ಶಶಿ ತರೂರ್ 
ದೇಶ

ವೈದ್ಯಕೀಯ, ಕಾನೂನು, ಫೋರೆನ್ಸಿಕ್ ಪುರಾವೆಗಳ ಆಧಾರದ ಮೇಲೆ ತರೂರ್ ವಿರುದ್ಧ ಚಾರ್ಜ್ ಶೀಟ್

ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ-ಕಾನೂನು, ಫೋರೆನ್ಸಿಕ್ ಪುರಾವೆಗಳ ಆಧಾರದ ಮೇಲೆ ಕಾಂಗ್ರೆಸ್ ನಾಯಕ ಹಾಗೂ ಸುನಂದಾ ಪುಷ್ಕರ್ ಅವರ ಪತ್ನಿ ಶಶಿ ತರೂರ್ ಅವರ ಹೆಸರನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ನವದೆಹಲಿ : ಸುನಂದಾ ಪುಷ್ಕರ್  ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ  ವೈದ್ಯಕೀಯ-ಕಾನೂನು, ಫೋರೆನ್ಸಿಕ್ ಪುರಾವೆಗಳ ಆಧಾರದ ಮೇಲೆ ಕಾಂಗ್ರೆಸ್ ನಾಯಕ  ಹಾಗೂ ಸುನಂದಾ ಪುಷ್ಕರ್ ಅವರ ಪತ್ನಿ ಶಶಿ ತರೂರ್  ಅವರ ಹೆಸರನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಈ ಪ್ರಕರಣದ ಜಾರ್ಜ್ ಶೀಟ್ ನಲ್ಲಿ ಶಶಿ ತರೂರ್ ಅವರನ್ನೇ ಏಕೈಕ ಆರೋಪಿಯನ್ನಾಗಿಸಲಾಗಿದೆ. 3 ಸಾವಿರ ಪುಟಗಳ ಜಾರ್ಜ್ ಶೀಟ್ ನಲ್ಲಿ  ಶಶಿ ತರೂರ್  ಅವರ ಪತ್ನಿಯೊಂದಿಗೆ ಕ್ರೂರವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ತನಿಖೆಯ ಸಂದರ್ಭದಲ್ಲಿ ವಿಶ್ಲೇಷಿಸಿದ ವೈದ್ಯಕೀಯ-ಕಾನೂನು ಮತ್ತು ನ್ಯಾಯ ಸಾಕ್ಷ್ಯಗಳ ಆಧಾರದ ಮೇಲೆ ಮತ್ತು ಮಾನಸಿಕ ಶವಪರೀಕ್ಷೆಯ ತಜ್ಞರ ಅಭಿಪ್ರಾಯದಲ್ಲಿ ಜಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಈ ವಿಷಯವು ನ್ಯಾಯಾಧೀಶರದ್ದಾಗಿದೆ" ಎಂದು ದೆಹಲಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಸಾವಿನ ಕಾರಣವನ್ನು ಗುರುತಿಸುವ ಉದ್ದೇಶದಿಂದ ಸಾವಿನ ಸಮಯದಲ್ಲಿ  ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು  ಮನೋವೈಜ್ಞಾನಿಕ  ಶವತಜ್ಞರು ಪುನರ್ ರಚಿಸಿದ  ಮಾನಸಿಕ ಸ್ಥಿತಿಯ ಮೌಲ್ಯಮಾಪನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುನಂದಾ ಪುಷ್ಕರ್ 2014 ಜನವರಿ 17 ರ ರಾತ್ರಿ  ದೆಹಲಿಯ ಲಕ್ಸುರಿ ಹೋಟೆಲ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು.  ಶಶಿ ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆ 498 (ಗಂಡ ಅಥವಾ ಕುಟುಂಬಸ್ಥರು ಮಹಿಳೆಗೆ ಗಾಯಗೊಳಿಸುವುದು ಅಥವಾ ಪ್ರಾಣಾಪಾಯ ತಂದೊಡ್ಡುವುದು),  306 (ಆತ್ಮಹತ್ಯೆಗೆ ಪ್ರೇರಣೆ) ಅಡಿಯಲ್ಲಿ ಜಾರ್ಜ್ ಶೀಟ್ ಸಲ್ಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!