ದೇಶ

ಲೋಕಪಾಲ್ ಆಯ್ಕೆ ಸಮಿತಿ ತೀರ್ಪುಗಾರರಾಗಿ ಮುಕುಲ್ ರೋಹಟಗಿ ನೇಮಕ: ಸುಪ್ರೀಂಗೆ ಕೇಂದ್ರ

Raghavendra Adiga
ನವದೆಹಲಿ: ಭ್ರಷ್ಟಾಚಾರ ನಿಗ್ರಹ ಉದ್ದೇಶದಿಂದ ಲೋಕಪಾಲ್ ನೇಮಕಾತಿ ಸಂಬಂಧ ರಚಿಸಲಾಗುವ ಆಯ್ಕೆ ಸಮಿತಿಗೆ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಪ್ರಧಾನ ಮಂತ್ರಿಗಳು ಆಧ್ಯಕ್ಷರಾಗಿರುವ ಆಯ್ಕೆ ಸಮಿತಿಗೆ ತೀರ್ಪುಗಾರರನ್ನಾಗಿ ಮುಕುಲ್ ರೋಹಟಗಿ ಅವರನ್ನು ನೇಮಕ ಮಾಡಲು ಮೇ 11ರಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ನ್ಯಾಯಮೂರ್ತಿ ರಂಜನ್ ಗೊಗೈ ನೇತೃತ್ವದ ಪೀಠಕ್ಕೆ ಕೇಂದ್ರ ಸರ್ಕಾರ ಇಂದು ಮಾಹಿತಿ ನೀಡಿದೆ.
2014 ರ ಮೇ ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೋಹಟಗಿ ಭಾರತದ ಅಟಾರ್ನಿ ಜನರಕ್ ಆಗಿ ನೇಮಕವಾಗಿದ್ದರು. ಅವರು ಜೂನ್ 2017 ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ಹಿರಿಯ ವಕೀಲರಾಗಿದ್ದ ಪಿಪಿ ರಾವ್ ಸೆಪ್ಟೆಂಬರ್ 11, 2017ಕ್ಕೆ ನಿಧರಾದ ಬಳಿಕ ಲೋಕಪಾಲ್ ಆಯ್ಕೆ ಸಮಿತಿಯ ಈ ಹುದ್ದೆ ಖಾಲಿಯಾಗಿ ಉಳಿದಿತ್ತು.
SCROLL FOR NEXT