ದೇಶ

ರಸ್ತೆಯಲ್ಲಿ ದಾಂಧಲೆ ಪ್ರಕರಣ: ನವಜೋತ್ ಸಿಂಗ್ ಸಿಧು ಅಪರಾಧಿ; ಸಾವಿರ ರೂ. ದಂಡ

Sumana Upadhyaya

ನವದೆಹಲಿ: 1988ರಲ್ಲಿ ವೃದ್ಧರೊಬ್ಬರ  ಮೇಲೆ ರಸ್ತೆಯಲ್ಲಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಂಜಾಬ್ ಪ್ರವಾಸೋದ್ಯಮ ಸಚಿವ ನವಜೋತ್ ಸಿಂಗ್ ಸಿಧು ಅವರನ್ನು ಅಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ ಮತ್ತು ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ, ಭಾರತೀಯ ದಂಡ ಸಂಹಿತೆ ಸೆಕ್ಷನ್ 323ರಡಿಯಲ್ಲಿ ಅಪರಾಧಿ ಎಂದು ತೀರ್ಪು ನೀಡಿ 1000 ರೂಪಾಯಿ ದಂಡ ವಿಧಿಸಿದೆ. ಆದರೆ ಜೈಲು ಶಿಕ್ಷೆಯಿಂದ ಸಿಧುಗೆ ವಿನಾಯಿತಿ ನೀಡಿದೆ.

ಪ್ರಕರಣದ ಮೊದಲ ಆರೋಪಿ ನವಜೋತ್ ಸಿಂಗ್ ಸಿಧುಗೆ ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು ಜೈಲು ಶಿಕ್ಷೆಯಿಂದ ವಿನಾಯ್ತಿ ನೀಡಲಾಗಿದೆ. ಆದರೆ ಪ್ರಕರಣದ ಎರಡನೇ ಆರೋಪಿ ರೂಪಿಂದರ್ ಸಿಂಗ್ ಸಂದು ಅವರನ್ನು ಖುಲಾಸೆಗೊಳಿಸಿದೆ.

SCROLL FOR NEXT