ದೇಶ

ಪಿಎನ್ಬಿ ಹಗರಣ: ಗೀತಾಂಜಲಿ ಗ್ರೂಪ್, ಮೆಹುಲ್ ಚೋಕ್ಸಿ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿದ ಸಿಬಿಐ

Raghavendra Adiga
ನವದೆಹಲಿ: ಪಿಎನ್ಬಿ ಹಗರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಗೀತಾಂಜಲಿ ಗ್ರೂಪ್ಸ್ ನ ಶತಕೋಟ್ಯಾಧಿಪತಿ ಆಭರಣ ವ್ಯಾಪಾರಿ ಮೆಹುಲ್‌ ಚೋಕ್ಸಿ ವಿರುದ್ಧ ಸಿಬಿಐ ಇಂದು ಚಾರ್ಜ್ ಶೀಟ್ ಸಲ್ಲಿಸಿದೆ.
ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಚೋಕ್ಸಿ ವಿರುದ್ಧ ಆರೋಪಪಟ್ಟಿ ದಾಖಲಾಗಿದೆ,
ಚೋಕ್ಸಿ ಅವರ ಗೀತಾಂಜಲಿ ಗ್ರೂಪ್ ಸೇರಿದಾಂತೆ 16 ಇತರ ಘಟಕಗಳ (ಕಂಪೆನಿಗಳು ಮತ್ತು ವ್ಯಕ್ತಿಗಳು) ವಿರುದ್ಧ ಆರೋಪಪಟ್ಟಿ ದಾಖಲಾಗಿದೆ. ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಭ್ರಷ್ಟಾಚಾರ ತಡೆ ನಿಯಮದಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಚೋಕ್ಸಿಯ ಸೋದರಳಿಯ ನೀರವ್ ಮೋದಿ ವಿರುದ್ಧ ಮೇ 14 ರಂದು ಸಲ್ಲಿಸಿದ ಚಾರ್ಜ್ ಶೀಟ್ ಗಿಂತ ಬೇರೆಯಾಗಿದೆ.ಚೋಕ್ಸಿಯ ವಿರುದ್ಧದ ಎಫ್ಐಆರ್ ಗೆ ಸಂಬಂಧಿಸಿ ಪ್ರಸ್ತುತ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೀರವ್ ಮೋದಿ ವಿರುದ್ಧ ಸಹ ಪೂರಕ ಆರೋಪಪಟ್ಟಿಗಳನ್ನು ಶೀಘ್ರವಾಗಿ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದರು.
ಫೆಬ್ರವರಿ 13 ರ ದಿನಾಂಕದ ಪಿಎನ್ಬಿ ದೂರಿನ ಆಧಾರದಲ್ಲಿ ಚೋಕ್ಸಿ ವಿರುದ್ಧ ಎಫ್ಐಆರ್ ದಾಖಲಾಗಿದೆ,
SCROLL FOR NEXT