ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮುಚ್ಚಳಿಕೆ ಬರೆದು ಕೊಡುತ್ತೇವೆ, ಲಿಖಿತ ಆದೇಶ ಬೇಡ: 'ಸುಪ್ರೀಂ' ಗೆ ಬಿಜೆಪಿ ಪರ ವಕೀಲರ ಮನವಿ

ವಿಶ್ವಾಸಮತ ಯಾಚನೆ ಕುರಿತ ಆದೇಶವನ್ನು ಲಿಖಿತ ರೂಪದಲ್ಲಿ ನೀಡದಂತೆ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ಮನವಿ ಮಾಡಿಕೊಂಡ ಘಟನೆ ಸುಪ್ರೀಂ ಕೋರ್ಟ್ ನಲ್ಲಿ ನಡೆದಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 18 May 2018, 12:45 pm
ನವದೆಹಲಿ: ವಿಶ್ವಾಸಮತ ಯಾಚನೆ ಕುರಿತ ಆದೇಶವನ್ನು ಲಿಖಿತ ರೂಪದಲ್ಲಿ ನೀಡದಂತೆ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ಮನವಿ ಮಾಡಿಕೊಂಡ ಘಟನೆ ಸುಪ್ರೀಂ ಕೋರ್ಟ್ ನಲ್ಲಿ ನಡೆದಿದೆ.
ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪರ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ನಾಳೆಯೇ ವಿಶ್ವಾಸ ಮತ ಯಾಚನೆಗೆ ಆದೇಶ ನೀಡಿತು. ಈ ವೇಳೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠಕ್ಕೆ ಮನವಿ ಮಾಡಿಕೊಂಡ ಮುಕುಲ್ ರೋಹ್ಟಗಿ ಅವರು, ಬೇಕಿದ್ದರೆ ತಾವು ಮುಚ್ಚಳಿಕೆ ಬರೆದು ಕೊಡುತ್ತೇವೆ. ಆದರೆ ಆದೇಶವನ್ನು ಲಿಖಿತ ರೂಪದಲ್ಲಿ ನೀಡುವುದು ಬೇಡ ಎಂದು ಮನವಿ ಮಾಡಿಕೊಂಡರು. 
ಇದಕ್ಕೂ ಮೊದಲು ಅತ್ತ ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ನಾಳೆಯೇ ವಿಶ್ವಾಸ ಮತ ಯಾಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಾಗ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ಅವರು, ಸದನದಲ್ಲಿ ಶನಿವಾರವೇ ಬಲಾಬಲ ಪರೀಕ್ಷೆ ಬದಲು, ಸಿದ್ಧತೆ ಮಾಡಿಕೊಳ್ಳಲು ಸಮಯಾವಕಾಶ ಕೊಡುವಂತೆಯೂ ಮತ್ತು ವಿಶ್ವಾಸಮತ ಯಾಚನೆಯನ್ನು ಸೋಮವಾರಕ್ಕೆ ನಿಗದಿಪಡಿಸುವಂತೆಯೂ ಮುಕುಲ್ ರೋಹ್ಟಗಿ ಆಗ್ರಹಿಸಿದರು. ಆದರೆ ಅವರ ಈ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ ನಾಳೆಯೇ ವಿಶ್ವಾಸಮತಕ್ಕೆ ಆದೇಶ ನೀಡಿತು.

Advertisement

Advertisement

ಇದಕ್ಕೂ ಮೊದಲು ಶಾಸಕರು ನಿರ್ಭೀತಿಯಿಂದ ಮತ ಚಲಾಯಿಸುವಂತಾಗಲು ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಇಡೀ ಪ್ರಕ್ರಿಯೆಯನ್ನು ವೀಡಿಯೋ ಚಿತ್ರೀಕರಣ ಮಾಡಬೇಕು ಎಂದು ಅಭಿಷೇಕ್‌ ಮನು ಸಿಂಘ್ವಿ ಕೋರಿದರು. 
ಕಾಂಗ್ರೆಸ್‌-ಜೆಡಿಎಸ್‌ ಬರೆದ ಪತ್ರಗಳಲ್ಲೂ ಪ್ರತಿಯೊಬ್ಬ ಶಾಸಕರ ಸಹಿ ಇಲ್ಲ. ಪ್ರತಿಯೊಬ್ಬ ಶಾಸಕರೂ ಚುನಾವಣೋತ್ತರ ಮೈತ್ರಿಯ ಬಳಿಕ ತಮ್ಮ ಬೆಂಬಲ ಮತ್ತು ನಿಲುವನ್ನು ಘೋಷಿಸುತ್ತಾರೆ ಎಂದು ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ವಾದಿಸಿದರು. ಯಡಿಯೂರಪ್ಪ ಅವರು ಶಾಸಕರ ಹೆಸರುಗಳ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡುವ ಅಗತ್ಯವಿಲ್ಲ. ಏಕೆಂದರೆ ಬಹುಮತ ಸಾಬೀತು ಪಡಿಸುವುದು ಸದನದಲ್ಲೇ ಹೊರತು, ಹೊರಗೆ ಅಲ್ಲ ಎಂದು ಸುಪ್ರೀಂ ಕೋರ್ಟಿನಲ್ಲಿ ಮುಕುಲ್‌ ರೋಹ್ಟಗಿ ವಾದ ಮಂಡಿಸಿದರು. 
ಇನ್ನು ಇತ್ತ ಕರ್ನಾಟಕದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಅವರು ಅತಿದೊಡ್ಡ ಪಕ್ಷ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡುತ್ತಿದ್ದಂತೆಯೇ ಅತ್ತ ಗೋವಾ, ಬಿಹಾರ, ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಅತೀದೊಡ್ಡ ಪಕ್ಷಗಳಿಗೆ ಮೊದಲು ಅವಕಾಶ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ರಾಜ್ಯಗಳಲ್ಲಿ ಬಿಜೆಪಿ ಇತರೆ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿದ್ದು, ಈ ಸರ್ಕಾರಗಳ ಅಸ್ತಿತ್ವಕ್ಕೆ ಸುಪ್ರೀಂ ಆದೇಶದಿಂದ ಧಕ್ಕೆಯಾಗುವ ಎಲ್ಲ ಸಾಧ್ಯತೆಗಳಿವೆ ಇದೇ ಕಾರಣಕ್ಕೆ ಮುಕುಲ್ ರೋಹ್ಟಗಿ ಅವರು ಲಿಖಿತ ಆದೇಶ ಬೇಡ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement