ದೇಶ

ಚುನಾವಣೆ ಏಕೆ ಬೇಕು? ಕೇಂದ್ರವೇ ಸಿಎಂಗಳನ್ನೂ ನೇಮಕ ಮಾಡಲಿ: ಉದ್ಧವ್ ಠಾಕ್ರೆ

Raghavendra Adiga
ಮುಂಬೈ: "ಮುಇಂದೊಂದು ದಿನ ಕೇಂದ್ರ ಸರ್ಕಾರ ತಾನು ರಾಜ್ಯಪಾಲರನ್ನು ನೇಮಕ ಮಾಡುವಂತೆಯೇ ಆಯಾ ರಾಜ್ಯದ ಮುಖ್ಯಮಂತ್ರಿಗಳನ್ನೂ ನೇಮಿಸಬಹುದು" ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಹೇಳಿದ್ದಾರೆ. 
ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಈ ಮಾತನ್ನು ಹೇಳಿದ್ದು ಭಾರತೀಯ ಜನತಾ ಪಕ್ಷದಿಂದಾಗಿ "ಪ್ರಜಾಪ್ರಭುತ್ವವು ಅವಮಾನಕ್ಕೊಳಗಾಗುತ್ತಿದೆ" ಎಂದರು.
"ಪ್ರಜಾಪ್ರಭುತ್ವವನ್ನೇ ಅವಮಾನಿಸುವಂತಾದ ಮೇಲೆ ಪ್ರಜಾಪ್ರಭುತ್ವ ರಾಷ್ಟ್ರವೆಂದು ಕರೆಯುವ ಔಚಿತ್ಯವೇನು? ಚುನಾವಣೆಗಳನ್ನೆಲ್ಲಾ ನಿಲ್ಲಿಸಿಬಿಡಿ ಆಗ ಪ್ರಧಾನಿ ಮೋದಿ ತಾವು ಯಾವ ತೊಂದರೆ ಇಲ್ಲದೆ ವಿದೇಶ ಯಾತ್ರೆ ಮಾಡಬಹುದು"  ಮುಂಬೈ ಸಮೀಪದ ಉಲ್ಲಾಸನಗರದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಮಾತನಾಡಿದ ಠಾಕ್ರೆ ಹೇಳಿದ್ದಾರೆ.
"ಚುನಾವಣೆ ನಡೆಸುವುದನ್ನೇ ನಿಲ್ಲಿಸಿ, ಆಗ ಹಣ ಹಾಗೂ ಸಮಯ ಉಳಿತಾಯವಾಗುತ್ತದೆ. ಆಯಾ ರಾಜ್ಯಗಳಿಗೆ ರಾಜ್ಯಪಾಲರ ನೇಮಕ ಮಾಡುವಂತೆಯೇ ಮುಖ್ಯಮಂತ್ರಿಗಳನ್ನೂ ನೇಮಕ ಮಾಡಿರಿ.
ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಇಂದು ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಬಿಜೆಪಿಗೆ ರಾಜ್ಯದಲ್ಲಿ ಬಹುಮತ ಸಾಬೀತಿಗೆ ಸಾಕಷ್ಟು ಸಂಖ್ಯಾಬಲವಿಲ್ಲದಿದ್ದರೂ ಸಹ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನ ನಿಡಿ ವಿವಾದಾತ್ಮಕ ನಿರ್ಧಾರ ಕೈಗೊಂಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಠಾಕ್ರೆ ಬಿಜೆಪಿ ಮುಖಂಡರಾದ ರಾಜ್ಯಪಾಲರಿಂದ ಇನ್ನೇನು ನಿರೀಕ್ಷಿಸುವಂತಿಲ್ಲ. ಎಂದರು.
ಅವರು ಅಯೋಧ್ಯೆ ವಿಚಾರ ಹಾಗೂ ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಬಿಎಪಿ ಶಿವಸೇನೆ ಮೈತ್ರಿಯ ತಳಮಳದ ಕುರಿತು ಮಾತನಾಡಿದರು.
ಚುನಾವಣೆ ಸಮೀಪಿಸಿದಾಗ ಮಾತ್ರ ಬಿಜೆಪಿ ಅಯೋಧ್ಯೆ ವಿವಾದದ ಬಗ್ಗೆ ಮಾತನಾಡುತ್ತದೆ ಎಂದ ಠಾಕ್ರೆ ಪಕ್ಷವು ಕರ್ನಾಟಕದಲ್ಲಿ ಅಧಿಕಾರಕ್ಕೇರಲು ಬಳಸಿದ ಶಕ್ತಿಯನ್ನೇ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಬಳಸಿಕೊಳ್ಳಬೇಕು ಎಂದಿದ್ದಾರೆ.
SCROLL FOR NEXT