ದೇಶ

ಪ್ರಪಂಚ ಪರ್ಯಟನೆ ಮುಗಿಸಿ ವಾಪಸ್ಸಾದ ಐಎನ್ಎಸ್ ವಿ ತಾರಿಣಿ, ಮಹಿಳಾ ತಂಡ!

Srinivas Rao BV
ಪಣಜಿ: ನೌಕೆಯಲ್ಲೇ ವಿಶ್ವ ಪರ್ಯಟನೆ ಉದ್ದೇಶದಿಂದ 2017ರ ಸೆ.10ರಂದು ಪ್ರಯಾಣ ಆರಂಭಿಸಿದ್ದ, ಭಾರತೀಯ ನೌಕಾಪಡೆಯ 6 ಮಹಿಳಾ ಸಿಬ್ಬಂದಿಗಳನ್ನು ಒಳಗೊಂಡ ತಂಡ ಗೋವಾಗೆ ವಾಪಸ್ಸಾಗಿದೆ. 
ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ ನೇತೃತ್ವದ ಪೂರ್ಣ ಮಹಿಳಾ ಸಿಬ್ಬಂದಿಗಳ ಐಎನ್‌ಎಸ್‌'ವಿ ತಾರಿಣಿ ನೌಕೆ, ಪ್ರಪಂಚ ಪರ್ಯಟನೆ ಮುಕ್ತಾಯಗೊಳಿಸಿ ಮೇ.21 ರಂದು ಗೋವಾಗೆ ವಾಪಸ್ಸಾಗಿದೆ.  ಜಾಗತಿಕ ವೇದಿಕೆಯಲ್ಲಿ ‘ನಾರಿ ಶಕ್ತಿ (ಮಹಿಳೆಯರ ಶಕ್ತಿ)’ಯನ್ನು ಪ್ರದರ್ಶಿಸುವ ಮತ್ತು ಸವಾಲು ಭರಿತ ವಾತಾವರಣದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಮಹಿಳಾ ಸಿಬ್ಬಂದಿಗಳೇ ಇರುವ ತಂಡವೊಂದು ಕಳೆದ ಸೆ.10ರಂದು ಗೋವಾದಿಂದ ವಿಶ್ವಪರ್ಯಟನೆ ಆರಂಭಿಸಿತ್ತು. 
 ಮಹಿಳಾ ತಂಡ165 ದಿನಗಳ ಈ ವಿಶ್ವಪರ್ಯಟನೆ ವೇಳೆ ಕೇವಲ 4 ಸ್ಥಳಗಳಲ್ಲಿ ಮಾತ್ರವೇ ತಾರಿಣಿ ನೌಕೆ ನಿಲುಗಡೆ ಮಾಡಿದ್ದು ಉಳಿದ ದಿನಗಳನ್ನು ಯಾನಗಳಲ್ಲಿಯೇ ಕಳೆದಿದೆ. ಅಷ್ಟೇ ಅಲ್ಲದೇ ವಿಶ್ವದಲ್ಲೇ ಅತ್ಯಂತ ಭಯಾನಕ ಎನ್ನಲಾದ ದಕ್ಷಿಣ ಅಮೆರಿಕದ ದಕ್ಷಿಣದ ತುತ್ತತುದಿಯಲ್ಲಿರುವ ಕೇಪ್‌ಹಾರ್ನ್ ಅನ್ನು ಸುತ್ತಿ ಭಯಾನಕ ಡ್ರೇಕ್ ಪ್ಯಾಸೇಜ್ ಅನ್ನು ದಾಟಿ ದಾಖಲೆ ನಿರ್ಮಿಸಿತ್ತು. 
SCROLL FOR NEXT