ನವದೆಹಲಿ : ಪ್ರಧಾನಮಂತ್ರಿ ನರೇಂದ್ರಮೋದಿ ಕೇಂದ್ರ ಸೇವೆಗಳಲ್ಲಿ ಆರ್ ಎಸ್ ಎಸ್ ಆಯ್ಕೆ ಮಾಡಿದ ಅಧಿಕಾರಿಗಳನ್ನು ನೇಮಕ ಮಾಡಲು ಮುಂದಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದು, ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಎಚ್ಚೆತ್ತುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಅಖಿಲ ಭಾರತ ಪರೀಕ್ಷೆಗಳಲ್ಲಿ ಪಾಸಾಗಿರುವ ವಿದ್ಯಾರ್ಥಿಗಳನ್ನು ವಿವಿಧ ಹುದ್ದೆಗಳಿಗೆ ನೇಮಿಸುವಲ್ಲಿ ಮಹತ್ವದ ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಸಂದೇಶ ಪ್ರಕಟಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಕಚೇರಿಯಿಂದ ಬಂದಿರುವ ಪ್ರಸ್ತಾವದಂತೆ ಸಾರ್ವಜನಿಕ ಸಿಬ್ಬಂದಿ ಸಚಿವಾಲಯದ ಕಾಗದದ ಪ್ರತಿಯನ್ನು ರಾಹುಲ್ ಗಾಂಧಿ ಬೈ ಬೈ ಯುಪಿಎಸ್ ಸಿ ಎಂಬ ಹ್ಸಾಸ್ ಟಾಗ್ ನಲ್ಲಿ ಹಾಕಿದ್ದಾರೆ.