ದೇಶ

ಲಷ್ಕರ್ ಉಗ್ರ ಸಂಘಟನೆಯಿಂದ ಗುಪ್ತಚರ ಇಲಾಖೆಯೂ ಬೇಧಿಸಲಾಗದ ಮೊಬೈಲ್ ಅಭಿವೃದ್ಧಿ!

Srinivas Rao BV
ನವದೆಹಲಿ: ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ವಿದ್ಯಾರ್ಥಿ ವಿಭಾಗ ಗುಪ್ತಚರ ಇಲಾಖೆಯೂ ಬೇಧಿಸಲಾಗದಂತಹ ಮೊಬೈಲ್ ಫೋನ್ ಗಳನ್ನು ಅಭಿವೃದ್ಧಿಪಡಿಸಿದ್ದು, ಲಷ್ಕರ್ ಸಂಘಟನೆಯ ಸದಸ್ಯರೊಂದಿಗೆ ಸಂವಹನ ಮಾಡುವುದಕ್ಕಾಗಿಯೇ ಈ ಮೊಬೈಲ್ ನ್ನು ತಯಾರಿಸಲಾಗಿದೆ. 
ಅಲ್ ಮೊಹಮ್ಮದೀಯ ಸ್ಟೂಡೆಂಟ್ಸ್(ಎಎಂಎಸ್) ವಿದ್ಯಾರ್ಥಿ ಸಂಘಟನೆ ಮೊಬೈಲ್ ನ್ನು ತಯಾರಿಸಿದ್ದು, ನಿರ್ದಿಷ್ಟ ಚಿಪ್ ನ್ನು ಮೊಬೈಲ್ ಗೆ ಅಳವಡಿಕೆ ಮಾಡಿದ ಕೂಡಲೇ ಮೊಬೈ ಹತ್ತಿರದಲ್ಲೇ ಇರುವ ಯಾವುದೇ ಟವರ್ ನೊಂದಿಗೆ ಸಂಪರ್ಕ ಸಾಧಿಸುತ್ತದೆ. ಈ ಮೊಬೈಲ್ ಹ್ಯಾಂಡ್ ಸೆಟ್ ನಿಂದ ಮಾಡಿದ ಕರೆಗಳನ್ನು ಗುಪ್ತಚರ ಇಲಾಖೆ ಯಾವುದೇ ರೀತಿಯಲ್ಲೂ ಪತ್ತೆ ಮಾಡುವುದಕ್ಕೆ ಸಾಧ್ಯವಿಲ್ಲ, ಒಂದು ವೇಳೆ ಗುಪ್ತಚರ ಇಲಾಖೆ ಮೊಬೈಲ್ ಕರೆಯನ್ನು ಪತ್ತೆ ಮಾಡಲು ಯತ್ನಿಸಿದರೆ ತಕ್ಷಣವೇ ಕರೆ ಕಡಿತಗೊಳ್ಳುತ್ತದೆ. 
ಮುಲ್ತಾನ್ ಮೂಲದ ಎಲ್ಇಟಿ ಭಯೋತ್ಪಾದಕ ಜೈಬುಲ್ಲಾ ಎನ್ಐಎ ತನಿಖೆ ವೇಳೆ ಈ ಅಂಶವನ್ನು ಬಾಯ್ಬಿಟ್ಟಿದ್ದು, ಮಾ.3 ರಂದು ಭಾರತಕ್ಕೆ ನುಸುಳಿದ್ದ ಈತನನ್ನು ಕುಪ್ವಾರದಲ್ಲಿ ಏ.07 ರಂದು ಬಂಧಿಸಲಾಗಿತ್ತು. 
SCROLL FOR NEXT