ತೇಜಸ್ವಿ ಯಾದವ್-ಪ್ರಧಾನ ಮಂತ್ರಿ ನರೇಂದ್ರ ಮೋದಿ 
ದೇಶ

ಇಂಧನ ಬೆಲೆ ಇಳಿಸುವ ನನ್ನ ಸವಾಲನ್ನು ಸ್ವೀಕರಿಸುತ್ತೀರಾ: ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ

ಫಿಟ್ ನೆಸ್ ಬಗ್ಗೆ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರ ಸವಾಲನ್ನು ಸ್ವೀಕರಿಸುತ್ತೇನೆ ...

ನವದೆಹಲಿ: ಫಿಟ್ ನೆಸ್ ಬಗ್ಗೆ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರ ಸವಾಲನ್ನು ಸ್ವೀಕರಿಸುತ್ತೇನೆ ಅಂತ ಹೇಳಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಆರ್ ಜೆಡಿ  ನಾಯಕ ತೇಜಸ್ವಿ ಯಾದವ್ ಮತ್ತೊಂದು ಸವಾಲೆಸೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನೀವು ವಿರಾಟ್ ಕೊಹ್ಲಿಯವರ ಫಿಟ್ ನೆಸ್ ಸವಾಲನ್ನು ಸ್ವೀಕರಿಸಿರುವುದು ಸಂತೋಷ. ಈಗ ನಾನೊಂದು ಸವಾಲು ಹಾಕುತ್ತೇನೆ, ಇಂಧನ ಬೆಲೆ ಇಳಿಸಿ, ಇಲ್ಲದಿದ್ದರೆ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿ ಬೇರೆ ದಾರಿಯಿಲ್ಲದೆ ಇಂಧನ ಬೆಲೆಯನ್ನು ಇಳಿಸುವಂತೆ ನಾವು ಮಾಡುತ್ತೇವೆ. ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ಬಿಹಾರದ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್, ವಿರಾಟ್ ಕೊಹ್ಲಿ ಅವರ ಫಿಟ್ ನೆಸ್ ಚಾಲೆಂಜನ್ನು ನಾವು ವಿರೋಧಿಸುತ್ತಿಲ್ಲ. ಆದ್ರೆ ಪ್ರಧಾನಿ ಮೋದಿಯವರಿಗೆ ನಾನೊಂದು ಸವಾಲೆಸೆಯುತ್ತೇನೆ. ಯುವಕರಿಗೆ ಉದ್ಯೋಗ, ರೈತರಿಗೆ ಪರಿಹಾರ ಹಾಗೆಯೇ ದಲಿತ ಹಾಗೂ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯಗಳು ತಡೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಯುವಜನ ಮತ್ತು ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್, “ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್‍ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಚಾಲೆಂಜ್ ಹಾಕಿ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ವಿರಾಟ್ ಕೊಹ್ಲಿ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ಚಾಲೆಂಜ್ ಸ್ವೀಕರಿಸಿದ್ದರು. ನಂತರ ಅವರು ಪ್ರಧಾನಿ ಮೋದಿ, ಪತ್ನಿ ಅನುಷ್ಕಾ ಶರ್ಮ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರಿಗೆ ಚಾಲೆಂಜ್ ಹಾಕಿ ಟ್ವೀಟ್ ಮಾಡಿದ್ದರು.
ಕೊಹ್ಲಿ ಅವರ ಈ ಟ್ವೀಟ್ ಗೆ ಮೋದಿ ಪ್ರತಿಕ್ರಿಯಿಸಿದ್ದು, ಸವಾಲನ್ನು ಸ್ವೀಕರಿಸಿದ್ದೇನೆ. ನನ್ನ ಫಿಟ್ ನೆಸ್ ಕುರಿತ ವಿಡಿಯೋವನ್ನು ಅಪ್ಲೋಡ್ ಮಾಡುವುದಾಗಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT