ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದು ಎನ್ ಸಿಪಿ ಒಂದು ಸ್ಥಾನವನ್ನು ಉಳಿಸಿಕೊಂಡಿದೆ.
ಸೋಮವಾರ ಮಹಾರಾಷ್ಟ್ರದ ವಿಧಾನ ಪರಿಷತ್ ನ 6 ಸ್ಥಳೀಯ ಸಂಸ್ಥೆ ಸ್ಥಾನಗಳಿಗೆ ಮತದಾನ ನಡೆದಿತ್ತು. ಈ ಪೈಕಿ 5 ಸ್ಥಾನಗಳ ಮತ ಎಣಿಕೆ ಮೇ.24 ರಂದು ನಡೆದಿದ್ದು, ಬಿಜೆಪಿ ಹಾಗೂ ಶಿವಸೇನೆ ತಲಾ ಎರಡು ಸ್ಥಾನಗಳನ್ನು ಗೆದ್ದಿವೆ. ಶಿವಸೇನೆ ತಾನು ಸ್ಪರ್ಧಿಸಿದ್ದ 3 ಸ್ಥಾನಗಳ ಪೈಕಿ 2 ನ್ನು ಗೆದ್ದಿದ್ದು ಸುಧಾರಣೆ ಕಂಡಿದೆ.
ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಮಾಡಿಕೊಂಡು 5 ಪೈಕಿ 4 ಗೆದ್ದಿದ್ದರೆ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಎನ್ ಸಿಪಿ ಒಂದು ಸ್ಥಾನದಲ್ಲಿ ಗೆದ್ದಿದೆ, ಅಮ್ರಾವತಿ ಹೊರತುಪಡಿಸಿ ವಾರ್ಧಾ-ಚಂದ್ರಪುರ-ಗಡ್ಚಿರೋಲಿ ಸ್ಥಾನಗಳನ್ನು ಪಡೆದಿದ್ದು, ಶಿವಸೇನೆ ನಾಸಿಕ್, ಪರ್ಭಾನಿ-ಹಿಂಗೋಲಿಯಲ್ಲಿ ಗೆಲುವು ಸಾಧಿಸಿದೆ. ಎನ್ ಸಿಪಿ ರಾಯ್ಗಡ್-ರತ್ನಗಿರಿ-ಸಿಂಧುದುರ್ಗ ಸ್ಥಾನವನ್ನು ಉಳಿಸಿಕೊಂಡಿದೆ.