ನವದೆಹಲಿ: ಹೋಟೆಲ್ ವೊಂದರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಸಿಕ್ಕಿ ಬಿದ್ದಿರುವ ಮೇಜರ್ ಲೀತುಲ್ ಗೊಗೊಯಿ ಅವರ ವಿರುದ್ಧ ಭಾರತೀಯ ಸೇನೆ ಕೋರ್ಟ್ ತನಿಖೆಗೆ ಆದೇಶಿಸಿದೆ.
ಕಾಶ್ಮೀರದಲ್ಲಿ ಕಳೆದ ವರ್ಷ ಸೇನಾ ಸಿಬ್ಬಂದಿ ಮೇಲೆ ಕಲ್ಲೂ ತೂರುತ್ತಿದ್ದ ಪ್ರತ್ಯೇಕವಾದಿಯೊಬ್ಬರನ್ನು ಹ್ಯೂಮನ್ ಶೀಲ್ಡ್ ಆಗಿ (ಮಾನವ ರಕ್ಷಣಾ ಕವಚ) ಬಳಸಿ, ತನ್ನ ಜೀಪಿನ ಬಾನೆಟ್ ಗೆ ಕಟ್ಟಿ ಹಲವಾರು ಗ್ರಾಮಗಳಲ್ಲಿ ಪರೇಡ್ ಮಾಡಿಸಿ ಚರ್ಚೆಯ ಕೇಂದ್ರ ಬಿಂದುವಾಗಿದ್ದ ಸೇನಾ ಮೇಜರ್ ಲೀತುಲ್ ಗೊಗೊಯಿ ಅವರನ್ನು ನಿನ್ನೆ ಅಪ್ರಾಪ್ತ ಬಾಲಕಿಯೊಂದಿಗೆ ಶ್ರೀನಗರದ ಹೊಟೇಲ್ ವೊಂದರಿಂದ ಬಂಧಿಸಲಾಗಿದೆ.
ಇಂದು ಬೆಳಗ್ಗೆ ಈ ಕುರಿತು ಪ್ರತಿಕ್ರಿಯಿಸಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಭಾರತೀಯ ಸೇನೆಯಲ್ಲಿ ಯಾವುದೇ ಹುದ್ದೆಯಲ್ಲಿರುವ ಯಾರೇ ತಪ್ಪು ಮಾಡಿದರು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಇತರರಿಗೆ ಮಾದರಿಯಾಗುವಂತಹ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೋರ್ಟ್ ತನಿಖೆಗೆ ಆದೇಶಿಸಲಾಗಿದೆ.
ಹೊಟೇಲ್ ದಾಖಲೆಗಳ ಪ್ರಕಾರ ಇಬ್ಬರಿಗಾಗಿ ರೂಂ ಬುಕ್ ಮಾಡಿದ್ದ ಗೊಗೊ ಅವರು, ತನ್ನೊಂದಿಗೆ ಸಮೀರ್ ಅಹ್ಮದ್ ವ್ಯಕ್ತಿ ಹಾಗೂ ಸುಮಾರು 16 ವರ್ಷ ಪ್ರಾಯದ ಸ್ಥಳೀಯ ಹುಡುಗಿಯನ್ನೂ ರೂಂ ಗೆ ಕರೆತಂದಿದ್ದರು.
ಹೊಟೇಲ್ ನಿಯಮಗಳ ಪ್ರಕಾರ, ಸ್ಥಳೀಯ ವ್ಯಕ್ತಿಗಳು ರೂಂ ನಲ್ಲಿ ಇರುವಂತಿಲ್ಲ. ಹಾಗಾಗಿ ಹುಡುಗಿಯು ಹೊಟೇಲ್ ಪ್ರವೇಶಿಸುವುದನ್ನು ಸಿಬ್ಬಂದಿಗಳು ನಿರಾಕರಿಸಿದ ಕಾರಣಕ್ಕಾಗಿ, ಹೊರಗಡೆ ಹೋಗಿ ಇತರ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
ಈ ಸಂದರ್ಭದಲ್ಲಿ ಸಿಬ್ಬಂದಿಗಳು ಪೊಲೀಸರಿಗೆ ಕರೆ ಮಾಡಿದ್ದಾರೆ. ಇದರ ಪ್ರಕಾರ ನಿನ್ನೆ ಹೊಟೇಲ್ ರೂಂ ನಿಂದ ಗೊಗೋಯಿಯನ್ನು ಬಂಧಿಸಿದ್ದಾರೆ. ಹೊಟೇಲ್ ಬುಕ್ ಮಾಡಿರುವುದು ವ್ಯಭಿಚಾರಕ್ಕಾಗಿಯೋ ಅಥವಾ ಹನಿಟ್ರ್ಯಾಪ್ ಮೂಲಕ ಭರತೀಯ ಸೇನೆಯ ರಹಸ್ಯಗಳನ್ನು ಪಾಕಿಸ್ತಾನಕ್ಕೆ ನೀಡುವುದಕ್ಕಾಗಿಯೋ ಅಥವ ಇನ್ಯಾವುದೇ ಕಾರಣಕ್ಕಾಗಿಯೋ ಎಂದು ಸೇನಾ ಅಧಿಕಾರಿಗಳು ತೀವೃ ವಿಚಾರಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos