ದೇಶ

ಸ್ಥಿರತೆ ಮತ್ತು ಕಠಿಣ ಶ್ರಮ ಯಶಸ್ಸಿಗೆ ಕಾರಣ: ಸಿಬಿಎಸ್ ಇ ಟಾಪರ್ ಮೇಘನಾ

Lingaraj Badiger
ನವದೆಹಲಿ: ಯಶಸ್ಸಿಗೆ ಯಾವುದೇ ರಹಸ್ಯ ಸೂತ್ರ ಇಲ್ಲ. ನಿರಂತರ ಅಭ್ಯಾಸ ಮತ್ತು ಕಠಿಣ ಶ್ರಮವೇ ನನ್ನ ಯಶಸ್ಸಿಗೆ ಕಾರಣ ಎಂದು ಸಿಬಿಎಸ್ ಇ 12ನೇ ತರಗತಿಯ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ಸ್ಥಾನ ಪಡೆದಿರುವ ಗಾಜಿಯಾಬಾದ್ ನ ಮೇಘನಾ ಶ್ರೀವಾಸ್ತವ ಅವರು ಹೇಳಿದ್ದಾರೆ.
ಮೇಘನಾ ಶ್ರೀವಾಸ್ತವ ಅವರು 500 ಅಂಕಗಳಿಗೆ 499 ಅಂಕ(ಶೇ 99.8) ಪಡೆದು ಟಾಪರ್ ಆಗಿದ್ದಾರೆ. ತಮ್ಮ ಈ ಸಾಧನೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೇಘನಾ, ನನಗೆ ಸಂತಸವಾಗಿದೆ. ಇದನ್ನು ನಾನು ನಿರೀಕ್ಷಿರಲಿಲ್ಲ. ಟಾಪರ್‌ ಆದ ವಿಷಯದಲ್ಲಿ ಯಾವುದೇ ರಹಸ್ಯ/ಗುಟ್ಟು ಇಲ್ಲ, ಎಲ್ಲರೂ ವರ್ಷಪೂರ್ತಿ ಕಠಿಣ ಪರಿಶ್ರಮ ಹಾಕಿ ಓದಬೇಕು ಮತ್ತು ಸ್ಥಿರ ಮನಸ್ಥಿತಿಯನ್ನು ಹೊಂದಿರಬೇಕು ಎಂದಿದ್ದಾರೆ.
ನಾನು ಅಧ್ಯಯನ ಮಾಡಿದ ಗಂಟೆಗಳ ಸಂ‌ಖ್ಯೆಯನ್ನು ಎಂದಿಗೂ ಲೆಕ್ಕ ಹಾಕಿಲ್ಲ. ನನ್ನ ಶಿಕ್ಷಕರು ಮತ್ತು ಪೋಷಕರು ನಿಜವಾಗಿಯೂ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರು ನನಗೆ ಎಂದಿಗೂ ಒತ್ತಡ ಹಾಕಿಲ್ಲ ಎಂದು ಮೇಘನಾ ಹೇಳಿದ್ದಾರೆ.
ಮೇಘನಾ ಸಿಬಿಐ ಮಾಜಿ ನಿರ್ದೇಶಕ ಅನಿಲ್ ಸಿನ್ಹಾ ಅವರ ಸಂಬಂಧಿಯಾಗಿದ್ದು, ಅವಳು ಮೊದಲಿನಿಂದಲೂ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
SCROLL FOR NEXT