ನವದೆಹಲಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲಾ ಯೋಜನೆಯಡಿ 10 ಕೋಟಿ ಮನೆಗಳಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ.
ಶುದ್ಧ ಅಡುಗೆ ಇಂಧನ ಪೂರೈಸುವ ಮೂಲಕ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಉಜ್ವಲಾ ಯೋಜನೆಯ ಪ್ರಮುಖ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾನು ಚಿಕ್ಕವನಾಗಿದ್ದಾಗ ಅಮ್ಮ ಹೊಗೆಯಿಂದ ಅಡುಗೆ ಮಾಡುತ್ತಿದದ್ದು, ಚಿಕ್ಕ ಮಕ್ಕಳು ಹೊಗೆ ಕುಡಿದು ಉಸಿರಾಟದ ತೊಂದರೆ ಅನುಭವಿಸುತಿದದ್ದು ಎಲ್ಲಾವೂ ನೆನಪು ಮಾಡಿಕೊಳ್ಳುವುದಾಗಿ ನರೇಂದ್ರಮೋದಿ ಹೇಳಿದರು.
ಉತ್ತರ ಪ್ರದೇಶದ ಬಾಲೈನಲ್ಲಿ 2016 ಮೇ 1 ರಂದು ಉಜ್ವಲಾ ಯೋಜನೆಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದ್ದರು.
ಈ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ 1600 ಸಹಾಯಧನ ಒದಗಿಸುವ ಮೂಲಕ 5 ಕೋಟಿ ಅನಿಲ ಸಂಪರ್ಕ ಪೂರೈಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿ 8 ಸಾವಿರ ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ.