ತೂತುಕುಡಿ(ತಮಿಳುನಾಡು): ತಮಿಳುನಾಡಿನ ತೂತುಕುಡಿ ಜಿಲ್ಲೆ ಸ್ಟೆರ್ಲೈಟ್ ತಾಮ್ರ ಘಟಕದ ಕಾರ್ಯನಿರ್ವಹಣೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಪರ್ ಸ್ಟಾರ್ ರಜನಿಕಾಂತ್ ತಲಾ 2 ಲಕ್ಷ ರೂ ಪರಿಹಾರವನ್ನು ಘೋಷಿಸಿದ್ದಾರೆ.
ನಟ, ರಾಜಕಾರಣಿ ರಜನಿಕಾಂತ್ ಬುಧವಾರ ತೂತುಕುಡಿ ಘಟನೆಯ ಗಾಯಾಳುಗಳನ್ನು ಜನರಲ್ ಆಸ್ಪತ್ರೆಯಲ್ಲಿ ಭೇಟಿಯಾದರು.
ಕಾನೂನು ಸುವ್ಯವಸ್ಥೆ ನಿರ್ಲಕ್ಷದ ಕಾರಣ ಈ ದುರಂತ ಸಂಭವಿಸಿದೆ ಎಂದ ರಜನಿಕಾಂತ್ ", ಈ ಘಟನೆಯು ಸರ್ಕಾರದ ನಿರ್ಲಕ್ಷ್ಯವನ್ನು ತೋರುತ್ತದೆ. ನಾನು ಈ ಕುರಿತಂತೆ ಹೆಚ್ಚು ಮಾತನಾಡುವುದಿಲ್ಲ. ಆದರೆ ಸರ್ಕಾರ ಜಾಗರೂಕವಾಗಿರಬೇಕು ಈ ಘಟನೆ ಒಂದು ದೊಡ್ಡ ಪಾಠವಾಗಿದೆ.ನಾನು ಘಟನೆಯಲ್ಲಿ ನಾವನ್ನಪ್ಪಿದ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡುತ್ತೇನೆ" ಎಂದರು.
ಮೇ.22 ರಂದು ತೂತುಕುಡಿಯಲ್ಲಿ ಸ್ಟೆರ್ಲೈಟ್ ತಾಮ್ರ ಘಟಕದ ಕಾರ್ಯನಿರ್ವಹಣೆಯನ್ನು ವಿರೋಧಿಸಿ ರೈತರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ನಡೆದ ಪೊಲೀಸ್ ಗೋಲಿಬಾರ್ ನಲ್ಲಿ 13 ಮಂದಿ ಮೃತಪಟ್ಟಿದ್ದರು. ತಾಮ್ರ ಘಟಕದಿಂದ ಅಂತರ್ಜಲ ಮಲಿನವಾಗುತ್ತಿದೆ, ಪರ್ಸರಕ್ಕೆ ಹಾನಿಯಾಗುತ್ತಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.