ದೇಶ

ಕೇರಳ: ನಿಪಾಹ್ ವೈರಸ್ ಗೆ ಮತ್ತೊಂದು ಬಲಿ, ಮೃತರ ಸಂಖ್ಯೆ 16ಕ್ಕೆ ಏರಿಕೆ

Srinivasamurthy VN
ಕೋಯಿಕ್ಕೋಡ್‌: ಮಾರಣಾಂತಿಕ ನಿಪಾಹ್ ವೈರಸ್ ಕೇರಳದಲ್ಲಿ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಸೋಂಕು ಪೀಡಿತರೊಬ್ಬರು ಸಾವನ್ನಪ್ಪುವ ಮೂಲಕ ಮೃತಪಟ್ಟವರ ಸಂಖ್ಯೆ ಇದೀಗ 16ಕ್ಕೆ ಏರಿಕೆಯಾಗಿದೆ.
ನಿಪಾಹ್ ವೈರಸ್‌ನಿಂದ ಹರಡುವ ಸೋಂಕಿಗೆ ಕೇರಳದಲ್ಲಿ ಗುರುವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾದಂತಾಗಿದೆ. ಕೇರಳದ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಸೋಂಕು ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ನದುವನ್ನೂರು ನಿವಾಸಿ ರಶೀನ್‌(25 ವರ್ಷ) ಎನ್ನುವವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 
ನಿನ್ನೆಯಷ್ಟೇ ಇದೇ ಮಾರಣಾಂತಿಕ ವೈರಾಣು ಸೋಂಕಿಗೆ ಟಿ.ಪಿ. ಮಧುಸೂಧನ್‌ (55) ಮತ್ತು ಅಖಿಲ್‌ (28) ಎನ್ನುವವರು ಮೃತಪಟ್ಟಿದ್ದರು. ಇದೀಗ ಈ ಪಟ್ಟಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ.
ಇನ್ನು ಕೇರಳ ರಾಜ್ಯದಲ್ಲಿ ಇದುವರೆಗೆ 18 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಈ ಪೈಕಿ 16 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನಿಪಾಹ್ ವೈರಸ್‌ ಬಗ್ಗೆ ಅನುಮಾನವಿದ್ದ 196 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ178 ಮಂದಿಯಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ ಎಂದು ವೈಧ್ಯಾಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT