ಅಖಿಲೇಶ್ ಯಾದವ್ (ಸಂಗ್ರಹ ಚಿತ್ರ)
ಲಖನೌ: 4 ಲೋಕಸಭೆ, 10 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿನ ಫಲಿತಾಂಶ ಬಿಜೆಪಿಯ ವಿಭಜನೆ ರಾಜಕೀಯಕ್ಕೆ ದೊರೆತ ಸೋಲು ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಬಣ್ಣಿಸಿದ್ದಾರೆ.
ಉಪ ಚುನಾವಣೆ ಪಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಇತ್ತ ಲಖನೌನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, ಉತ್ತರ ಪ್ರದೇಶದ ಖೈರಾನಾ ಮತ್ತು ನೂರ್ ಪುರ ಕ್ಷೇತ್ರಗಳಲ್ಲಿ ಜನ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಬಿಜೆಪಿಯ ವಿಭಜನೆ ರಾಜಕೀಯವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.
'ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದೆ ವಿಭಜನೆ ರಾಜಕೀಯ ಮಾಡುತ್ತಿರುವವರ ಸೋಲು ಇದು. ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಸಕಲ ಪ್ರಯತ್ನ ಮಾಡುತ್ತಿರುವವರಿಗೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ. ನೂರ್ ಪುರ ಮತ್ತು ಖೈರಾನ ಕ್ಷೇತ್ರಗಳ ಮತದಾರರಿಗೆ ನಾನು ಧನ್ಯವಾದ ಹೇಳುತ್ತೇನೆ. ಇದು ರೈತರು, ಬಡವರು ಮತ್ತು ದಲಿತರಿಗೆ ಸಂದ ಜಯವಾಗಿದೆ.
ಇನ್ನು ಖೈರಾನಾ ಲೋಕಸಭಾ ಕ್ಷೇತ್ರದಲ್ಲಿ ಆರ್ ಎಲ್ ಡಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಈ ಬಗ್ಗೆ ಮಾತನಾಡಿದ ಅಖಿಲೇಶ್ ಯಾದವ್, ಬಿಜೆಪಿ ರಾಜಕೀಯ ಮಾದರಿಯನ್ನು ಜನ ಖಂಡಿತಾ ಒಪ್ಪುವುದಿಲ್ಲ ಎಂದು ಹೇಳಿದರು. ಇದೇ ವೇಳೆ ಖೈರಾನಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಿರುವ ಕುರಿತು ಮಾತನಾಡಿದ ಅಖಿಲೇಶ್ ಸಿಎಂ ಯೋಗಿ ಆದಿತ್ಯಾನಾಥ್ ಅವರ ಭಾಷಣ ಕೇಳಿಯೇ ನನಗೆ ಭಯವಾಗಿತ್ತು ಯೋಗಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics