ಸಾಂದರ್ಭಿಕ ಚಿತ್ರ 
ದೇಶ

ಚುನಾವಣೆ ಹತ್ತಿರವಿದ್ದಾಗ ಮಾತ್ರ ಬಿಜೆಪಿಗೆ ರಾಮನ ನೆನಪು : ಕಾಂಗ್ರೆಸ್

ಚುನಾವಣೆ ಸಮೀಪಿಸುತ್ತಿದ್ದಂತೆ ಮಾತ್ರ ಬಿಜೆಪಿಗೆ ರಾಮ ಮಂದಿರ ವಿವಾದ ನೆನಪಾಗುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವ ದೆಹಲಿ: ಚುನಾವಣೆ ಸಮೀಪಿಸುತ್ತಿದ್ದಂತೆ  ಮಾತ್ರ  ಬಿಜೆಪಿಗೆ ರಾಮ ಮಂದಿರ ವಿವಾದ ನೆನಪಾಗುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್  ಮುಖಂಡ ರಾಜೀವ್ ಶುಕ್ಲಾ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾಗಿರುವ ರಾಜೀವ್ ಶುಕ್ಲಾ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದವರಿಗೆ ರಾಮನಲ್ಲಿ ನಂಬಿಕೆ ಇಲ್ಲ. ರಾಮನಿಗಾಗಿ ಏನೂ ಕೂಡಾ ಮಾಡಲ್ಲ. ಆದರೆ. ಚುನಾವಣೆ ಸಂದರ್ಭದಲ್ಲಿ ಆತನ ಹೆಸರಿನಲ್ಲಿ ಮತಗಳನ್ನು ಪಡೆದುಕೊಳ್ಳುತ್ತಾರೆ .ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ನಿಲುವಿಗೆ ಕಾಂಗ್ರೆಸ್ ಬದ್ಧವಾಗಿರುವುದಾಗಿ ತಿಳಿಸಿದರು.

ರಾಫೆಲ್  ಯುದ್ಧ ವಿಮಾನ ಖರೀದಿ  ಒಪ್ಪಂದಕ್ಕೆ ಸಂಬಂಧಿಸಿದ ಮಾಹಿತಿಯನ್ನು  ಸುಪ್ರೀಂಕೋರ್ಟ್ ಹಾಗೂ ಸಂಸತ್ತಿಗೆ  ಕೇಂದ್ರ ಸರ್ಕಾರ ಒದಗಿಸದೆ ಮುಚ್ಚಿಡುತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಮಾಹಿತಿಯನೆಲ್ಲಾ ಮುಚ್ಚಿಡುತ್ತಿದೆ . ಸುಪ್ರೀಂಕೋರ್ಟ್  ರಾಫೆಲ್ ಯುದ್ದ ವಿಮಾನ ಖರೀದಿ ಸಂಬಂಧ ಮಾಹಿತಿ ಕೇಳಿದರೆ ಎಂತಹ ವಿಧದ ಭ್ರಷ್ಟಾಚಾರ ಮುಕ್ತ ಭಾರತದ ಮಾಹಿತಿ ನೀಡುತ್ತಾರೆ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ, ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

IPL 2026: RCB vs PBKS ಪಂದ್ಯದಲ್ಲಿ ಎರಡು ಭಾರೀ ದಾಖಲೆ ನಿರ್ಮಿಸಿದ Virat Kohli

IPL 2026: ರನ್ ಮೆಷಿನ್ Virat Kohli ದಾಖಲೆಯನ್ನೇ ಮುರಿದು ಐತಿಹಾಸಿಕ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ!

ಸ್ವಾತಂತ್ರ್ಯ ಹೋರಾಟಗಾರ ಗಣೇಶ್ ಶಂಕರ್ ವಿದ್ಯಾರ್ಥಿ ಪ್ರತಿಮೆ ಸ್ಥಾಪನೆಗೆ ವಿಳಂಬ: ಯೋಗಿಗೆ ರಕ್ತದಲ್ಲಿ ಪತ್ರ ಬರೆದ SP ಶಾಸಕ!

ಬೌಂಡರಿ ತಡೆದ್ರೆ ಬಿಡ್ತೀವಾ.. 42 ಡಿಗ್ರಿ ತಾಪಮಾನದಲ್ಲೂ 4 ರನ್ ಓಡಿಸಿದ Virat Kohli, ಹೈರಾಣಾದ DDP, ವೈರಲ್ ವಿಡಿಯೋ ಅಸಲೀಯತ್ತು ಬಯಲು

SCROLL FOR NEXT