ಗುಜರಾತ್ : 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನರು ಕ್ಷಮಿಸಬಾರದು, ಎನ್ ಡಿಎ ಸರ್ಕಾರವನ್ನು ಕಿತ್ತು ಹಾಕಬೇಕೆಂದು ಕರೆ ನೀಡಿದ್ದಾರೆ.
ಗುಜರಾತಿನ ಜುನಾಗಡ ಜಿಲ್ಲೆಯ ವಾಂತಾಲಿ ಬಳಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ರಂಗಗಳಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ರೈತರು, ಯುವಕರು, ಮಹಿಳೆಯರು,ದಲಿತರು ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದಲ್ಲಿ ಕೇವಲ ಹೊಸ ಘೋಷಣೆಗಳನ್ನು ಮಾತ್ರ ನೀಡಲಾಗುತ್ತಿದೆ.ಯಾರಿಗೂ ಅನುಕೂಲ ಮಾಡದ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದರಿಂದ ಎಲ್ಲಾದಕ್ಕೂ ಪರಿಹಾರ ದೊರೆಯಲಿದೆ ಎಂದರು.