ತಿರುವನಂತಪುರ: ಮನ್ವಿಲ್ಲಾ ಸಮೀಪ ಪ್ಲಾಸ್ಟಿಕ್ ಉತ್ಪನ್ನ ಘಟಕದಲ್ಲಿ ಭಾರೀ ಪ್ರಮಾಣದ ಅಗ್ನಿ ಅವಘಡವುಂಟಾಗಿದೆ. ಪ್ರಾಥಮಿಕ ವರದಿಯಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಹತ್ತಿದ ಬೆಂಕಿಯನ್ನು ಆರಿಸಲು ಕನಿಷ್ಠ 30 ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ನಿನ್ನೆ ಸಾಯಂಕಾಲ 7 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ.
ಬೆಂಕಿ ಸ್ಪೋಟಗೊಂಡು ಹತ್ತಿ ಉರಿಯಲು ಆರಂಭಿಸಿದ ಕೂಡಲೇ ಪ್ಲಾಸ್ಟಿಕ್ ಘಟಕದೊಳಗಿದ್ದ ಕಾರ್ಮಿಕರು ಅಲ್ಲಿಂದ ಓಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಘಟಕದಿಂದ ಹೊರಗೆ ದಟ್ಟ ಹೊಗೆ ಸೂಸುತ್ತಿತ್ತು. ಅಗ್ನಿ ಶಾಮಕ ಸಿಬ್ಬಂದಿಗೆ ಬೆಂಕಿ ಆರಿಸಲು 4 ಗಂಟೆ ಸಮಯ ಹಿಡಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹೊಗೆ ಸೇವಿಸಿ ಉಸಿರಾಡಲು ಸಾಧ್ಯವಾಗದ ಇಬ್ಬರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಘಟಕದ ಹತ್ತಿರದಲ್ಲಿ ವಾಸಿಸುತ್ತಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.