ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮನೇಕಾಗಾಂಧಿ ಆಯೋಜಿಸಿದ್ದ ಸಾವಯವ ಕೃಷಿ ವಸ್ತು ಪ್ರದರ್ಶನಕ್ಕೆ ಸೋನಿಯಾ ಭೇಟಿ!

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಆಯೋಜಿಸಿದ್ದ ಸಾವಯವ ಕೃಷಿ ವಸ್ತು ಪ್ರದರ್ಶನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಸೋನಿಯಾ, ಮನೇಕಾ ಗಾಂಧಿ,
Nagaraja AB
Updated On : 1 Nov 2018, 7:09 am

ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಆಯೋಜಿಸಿದ್ದ ಸಾವಯವ ಕೃಷಿ ವಸ್ತು  ಪ್ರದರ್ಶನಕ್ಕೆ  ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

 ಸೋನಿಯಾಗಾಂಧಿ ವಾಸಿಸುತ್ತಿರುವ ಜನಪಥ್ ನಿಂದ ಸ್ವಲ್ಪ ದೂರದಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ  ಭಾರತದ ಮಹಿಳಾ - ಸಾವಯವ ಉತ್ಸವ  ಧ್ಯೇಯೆಯೊಂದಿಗೆ ಆಯೋಜಿಸಿದ್ದ ಪ್ರದರ್ಶನದಲ್ಲಿ ಸೋನಿಯಾಗಾಂಧಿ ಪಾಲ್ಗೊಂಡಿದ್ದು, ಸುಮಾರು ಒಂದು ಗಂಟೆ ಅಲ್ಲಿಯೇ ಕಳೆದಿದ್ದಾರೆ.

ಮನೇಕಾಗಾಂಧಿ ಬಿಜೆಪಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಊಹೆಗಳು ಹರಡುತ್ತಿರುವ ಮಧ್ಯೆ ಸೋನಿಯಾಗಾಂಧಿ ಪ್ರದರ್ಶನದಲ್ಲಿ ಪಾಲ್ಗೊಂಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಮನೇಕಾಗಾಂಧಿ ಪುತ್ರ ಪಿಲಿಬಿತ್ ಸಂಸದ ವರುಣ್ ಗಾಂಧಿ ಈಗಾಗಲೇ  ತಮ್ಮ ಉಪನಾಮದಲ್ಲಿರುವಂತೆ ರಾಜಕೀಯ ನೆಲೆ ಕಂಡುಕೊಳ್ಳಲು ತಯಾರಿ ನಡೆಸಿದ್ದಾರೆ. ಆಗಾಗ್ಗೇ  ಪ್ರಿಯಾಂಕಾ ಗಾಂಧಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.ವರುಣ್ ಗಾಂಧಿ ಬಿಜೆಪಿಯಲ್ಲಿದ್ದರೂ 2019ರ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಗುಲ್ ಎದ್ದಿದೆ.

 ಇಂದಿರಾಗಾಂಧಿ ಸೊಸೆಯಾಗಿರುವ ಮನೇಕಾಗಾಂಧಿ ಹಲವು ದಶಕಗಳಿಂದಲೂ ಸೋನಿಯಾ ಜೊತೆಗೆ ಹಲವು ದಶಕಗಳಿಂದಲೂ ಮಾತನಾಡುತ್ತಿರಲಿಲ್ಲ. ಖಾಸಗಿಯಾಗಿಯೂ ಎಲ್ಲಿಯೂ ವೇದಿಕೆ ಹಂಚಿಕೊಂಡಿರಲಿಲ್ಲ. ಒಂದು ವೇಳೆ ವರುಣ್ ಗಾಂಧಿ ಬಿಜೆಪಿ ತೊರೆದರೆ ಮನೇಕಾಗಾಂಧಿ ಏಲ್ಲಿ ಉಳಿಯುತ್ತಾರೆ ಎಂಬುದು ಇದೀಗ ಪ್ರಶ್ನೆ ಹುಟ್ಟುಹಾಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement