ಸಾಜಿ 
ದೇಶ

'ಸತ್ತ' ವ್ಯಕ್ತಿ ಅಂತ್ಯ ಸಂಸ್ಕಾರವಾದ 15 ದಿನದ ಬಳಿಕ ಬದುಕಿ ಬಂದ!

49 ವರ್ಷದ ಮೃತ ವ್ಯಕ್ತಿಯೊಬ್ಬ ಅಂತ್ಯಸಂಸ್ಕಾರವಾದ 15 ದಿನಗಳ ನಂತರ ಜೀವಂತವಾಗಿ ಮನೆಗೆ ಮರಳಿದ....

ವಯನಾಡ್: 49 ವರ್ಷದ ಮೃತ ವ್ಯಕ್ತಿಯೊಬ್ಬ ಅಂತ್ಯಸಂಸ್ಕಾರವಾದ 15 ದಿನಗಳ ನಂತರ ಜೀವಂತವಾಗಿ ಮನೆಗೆ ಮರಳಿದ ವಿಚಿತ್ರ ಘಟನೆ ಕೇರಳದ ವಯನಾಡ್ ನಲ್ಲಿ ನಡೆದಿದೆ. 
ಕಳೆದ ಸೆಪ್ಟೆಂಬರ್ 3 ರಂದು ಮನೆಯಿಂದ ಹೊರಟಿದ್ದ ಸಾಜಿ ಎಂಬ ವ್ಯಕ್ತಿ ಮನೆಯವರನ್ನು ಸಂಪರ್ಕಿಸಿಯೇ ಇರಲಿಲ್ಲ. ಇತ್ತೀಚಿಗೆ ಕರ್ನಾಟಕದ ಬೈರಕುಪ್ಪೆಯಲ್ಲಿ ಸಿಕ್ಕ ಅರೆಕೊಳೆತ ಶವವೊಂದನ್ನು ಆತನದೆಂದು ತಪ್ಪಾಗಿ ಗುರುತಿಸಿದ ಸಾಜಿ ತಾಯಿ ಮತ್ತು ಕಿರಿಯ ಸಹೋದರ ಶವವನ್ನು ಊರಿಗೆ ಕೊಂಡೊಯ್ದು ಅಕ್ಟೋಬರ್ 16ರಂದು ಅಂತ್ಯ ಸಂಸ್ಕಾರ ಮಾಡಿದ್ದರು. 
ಎರಡು ದಿನಗಳ ಹಿಂದೆ ಸಾಜಿ ಮನೆಗೆ ಬಂದಾಗ ಮನೆಯವರಿಗೆಲ್ಲ ಅಚ್ಚರಿ ಕಾದಿತ್ತು. ಅಲ್ಲದೆ ತಾನು ಸತ್ತನೆಂದು ತನ್ನ ಅಂತ್ಯ ಸಂಸ್ಕಾರ ಮಾಡಲಾಯಿತು ಎಂಬ ಸುದ್ದಿ ಕೇಳಿ ಸಾಜಿಗೂ ಶಾಕ್ ಆಯಿತು.
ಸಾಜಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲೆಂದು ಪೊಲೀಸ್ ಠಾಣೆಗೆ ಹೋದಾಗ ಅಪರಿಚಿತ ಶವವೊಂದು ಸಿಕ್ಕಿರುವ ಬಗ್ಗೆ ಪೊಲೀಸರು ಹೇಳಿದ್ದರು. ಶವದ ಕಾಲ ಮೇಲೆ ಸರ್ಜರಿ ಮಾಡಿದ ಗುರುತಿತ್ತು. ನನ್ನ ಅಣ್ಣನಿಗೂ ಕಾಲಿನ ಸರ್ಜರಿಯಾಗಿತ್ತು. ಶವ ಹತ್ತಿರ ಬಿದ್ದಿದ್ದ ಚಪ್ಪಲಿ ಮತ್ತು, ಮೃತನ ಶರೀರದ ಮೇಲಿದ್ದ ಬಟ್ಟೆಗಳು ಸಹ ತನ್ನ ಅಣ್ಣ ಸಾಜಿಯದ್ದನ್ನೇ ಹೋಲುತ್ತಿದ್ದವು. ಹೀಗಾಗಿ ಮೃತ ದೇಹ ಅಣ್ಣನದೇ ಇರಬೇಕೆಂದು ಭಾವಿಸಿದೆ ಎಂದು ಸಾಜಿ ಸಹೋದರ ಹೇಳಿದ್ದಾನೆ.
ಸಾಜಿ ಬದುಕಿದ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕೇರಳದಲ್ಲಿ ಅಂತ್ಯ ಸಂಸ್ಕಾರ ನಡೆದ ವ್ಯಕ್ತಿಯ ಪ್ರಕರಣ ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT