ದೇಶ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 59 ನಿಮಿಷಗಳಲ್ಲಿ ರೂ.1 ಕೋಟಿ ಸಾಲ: ಪ್ರಧಾನಿ ಭರವಸೆ

Nagaraja AB
ನವದೆಹಲಿ: ರಾಷ್ಟ್ರದ ಎರಡನೆಯ ಅತಿ ದೊಡ್ಡ ಉದ್ಯೋಗ ವಲಯ  ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ  ವಿಶೇಷ ಪೂರ್ಟಲ್ ಮೂಲಕ 59 ನಿಮಿಷಗಳಲ್ಲಿ  ಸಾಲ  ಮಂಜೂರು ಸೇರಿದಂತೆ  ಅನೇಕ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ವಿಜ್ಞಾನ ಭವನದಲ್ಲಿಂದು ಸೂಕ್ಷ್ಮ, ಸಣ್ಣ, ಮತ್ತು ಮದ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಎಸ್ ಟಿ ಅಡಿಯಲ್ಲಿ ನೋಂದಣಿಯಾಗಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ  ಕೇವಲ 59 ನಿಮಿಷಗಳಲ್ಲಿ ಸಾಲ ಮಂಜೂರು ಮಾಡಲಾಗುವುದು, ಇಂತಹ ಕೈಗಾರಿಕೆಗಳು  ಬಡ್ಡಿದರಗಳ ಮೇಲೆ ಶೇ 2 ರಷ್ಟು ಸಬ್ಸಿಡಿ ಅಥವಾ 1 ಕೋಟಿ ರೂ. ಹೆಚ್ಚಳದ ಸಾಲವನ್ನು ಪಡೆಯುತ್ತವೆ ಎಂದು ಅವರು ಹೇಳಿದರು.
SCROLL FOR NEXT