ಲಂಡನ್: ಫೇಸ್ ಬುಕ್ ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದಿದೆ. ಹ್ಯಾಕರ್ ಗಳ ಕೈಗೆ ಸುಮಾರು 120 ಮಿಲಿಯನ್ ಫೇಸ್ ಬುಕ್ ಖಾತೆಗಳ ಖಾಸಗಿ ಮೆಸೇಜ್ ಗಳನ್ನು ಮಾರಾಟ ಮಾಡಿದ್ದಾರೆ ಎಂದು ಬಿಬಿಸಿ ವರದಿ ಪ್ರಕಟಿಸಿದೆ.
ಉಕ್ರೇನ್, ರಷ್ಯಾ, ಅಮೆರಿಕ, ಬ್ರಿಟನ್ ನಲ್ಲಿನ ಫೇಸ್ ಬುಕ್ ಬಳಕೆದಾರರ ಫೇಸ್ ಬುಕ್ ಖಾಸಗಿ ಮೆಸೇಜ್ ಗಳನ್ನು ಹ್ಯಾಕರ್ ಗಳು ಪ್ರತಿ ಖಾತೆಯ ಮೆಸೇಜ್ ಗೆ 10 ಸೆಂಟ್ ಗಳಂತೆ ಮಾರಾಟ ಮಾಡಿದ್ದು ಈ ರೀತಿಯ ಒಟ್ಟು 81,000 ಖಾತೆಗಳ ಮೆಸೇಜ್ ಗಳನ್ನು ಈಗಗಾಲೇ ಪ್ರಕಟಿಸಿದ್ದಾರೆ.
ಸೆಪ್ಟೆಂಬರ್ ನಲ್ಲಿ ಮೆಸೇಜ್ ಗಳು ಹ್ಯಾಕ್ ಆಗಿರುವುದು ಬಹಿರಂಗವಾಗಿದ್ದು, ಫೇಸ್ ಬುಕ್ ಮಾತ್ರ ಇದನ್ನು ನಿರಾಕರಿಸಿದ್ದು, ತನ್ನ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷಗಳೂ ಉಂಟಾಗಿಲ್ಲ ಎಂದು ಹೇಳಿದೆ. ಇದೇ ವೇಳೆ ಬ್ರೌಸರ್ ಗಳಿಗೂ ಅನುಮಾನಾಸ್ಪದ ಎಕ್ಸ್ಟೆನ್ಷನ್ ಗಳನ್ನು ತೆಗೆದುಹಾಕುವಂತೆ ಮನವಿ ಮಾಡಲಾಗಿದೆ ಎಂದು ಫೇಸ್ ಬುಕ್ ಹೇಳಿದೆ.