ನವದೆಹಲಿ: ವಾಯುಮಾಲಿನ್ಯದಿಂದ ತತ್ತರಿಸಿರುವ ದೆಹಲಿಯಲ್ಲಿ ಪರಿಸರ ಸ್ನೇಹಿ ಗ್ರೀನ್ ಪಟಾಕಿ ಮಾತ್ರವೇ ಮಾರಾಟ ಮಾಡಬೇಕೆಂದು ಆದೇಶ ಹೊರಡಿಸಿದ್ದರೂ ದೆಹಲಿಯಲ್ಲಿ 640 ಕೆ.ಜಿಯಷ್ಟು ಪಟಾಕಿಗಳು ಸಿಕ್ಕಿದ್ದು, ಪ್ರಕರಣ ದಾಖಲಿಸಲಾಗಿದೆ.
ದೆಹಲಿ ಪೊಲೀಸರ ಪ್ರಕಾರ ಸರ್ದಾರ್ ಬಝಾರ್ ನಿಂದ 11.10 ಕೆಜಿಯಷ್ಟು ಪಟಾಕಿ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಮುಖ್ಯ ಪೇದೆ ಸಂದೀಪ್ ಚಾವ್ಲಾ ಗಸ್ತು ತಿರುಗುತ್ತಿದ್ದ ವೇಳೆ ಇಷ್ಟು ಪ್ರಮಾಣದ ಪಟಾಕಿ ಪತ್ತೆಯಾಗಿದ್ದು, ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಉಆಯುಕ್ತ ನೂಪುರ್ ಪ್ರಸಾದ್, ಪಟಾಕಿಗಳನ್ನು ವಶಕ್ಕೆ ಪಡೆದಿದ್ದು, ರವೀಂದರ್ (35) ಎಂಬ ವ್ಯಕ್ತಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದ ಎಂದು ತಿಳಿದುಬಂದಿದೆ.
ಪಟಾಕಿ ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.