ಚಂಡೀಗಢ: ಶತೃ ರಾಷ್ಟ್ರ ಪಾಕಿಸ್ತಾನದ ಐಎಸ್ಐ ಏಜೆಂಟ್ ಗೆ ಗುಪ್ತ ಮಾಹಿತಿಯನ್ನು ರವಾನಿಸುತ್ತಿದ್ದ ಆರೋಪದ ಮೇಲೆ ಗಡಿ ಭದ್ರತಾ ಪಡೆ(ಬಿಎಸ್ಎಫ್) ಯೋಧನನ್ನು ಗುಪ್ತದಳ ಅಧಿಕಾರಿಗಳು ಬಂಧಿಸಿದ್ದಾರೆ.
ಪಂಜಾಬಿನ ಫೆರೋಜ್ ಪುರ್ ನಲ್ಲಿ ಗುಪ್ತದಳದ ಅಧಿಕಾರಿಗಳು ಶೇಖ್ ರೈಯಾಜುದ್ದೀನ್ ನನ್ನು ಬಂಧಿಸಿದ್ದಾರೆ. ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ಗುಪ್ತ ಮಾಹಿತಿ ಹಾಗೂ ಛಾಯಾಚಿತ್ರಗಳನ್ನು ಕೆಲ ತಿಂಗಳುಗಳಿಂದ ಪಾಕಿಸ್ತಾನ ಮೂಲದ ಐಎಸ್ಐ ಏಜೆಂಟ್ ಗೆ ರವಾನಿಸುತ್ತಿದ್ದ ಎನ್ನಲಾಗಿದೆ.
ಶೇಖ್ ಮೂಲತಃ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ರೆನ್ ಪುರ್ ಗ್ರಾಮದವನಾಗಿದ್ದು ಬಿಎಸ್ಎಫ್ ನ 29ನೇ ಬೆಟಾಲಿಯನ್ ನಲ್ಲಿ ಪಂಜಾಬ್ ನ ಫೆರೋಜ್ ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಗುಪ್ತದಳ ಅಧಿಕಾರಿಗಳು ಹೇಳಿದ್ದಾರೆ.