ಕೋಲ್ಕತ್ತಾದಲ್ಲಿ ಶಬರಿಮಲೆ ಮಾದರಿಯ ದೇವಾಲಯ: ಕಾಳಿ ಪೂಜೆ ಪೆಂಡಾಲ್ ನಲ್ಲಿ ಮಹಿಳೆಯರಿಗೆ ನೋ ಎಂಟ್ರಿ!
ಕೋಲ್ಕತ್ತಾ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ನಿರ್ದಿಷ್ಟ ವಯಸ್ಸಿನ ಮಹಿಳೆಯರ ಪ್ರವೇಶ ನಿರ್ಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಪುರುಷರಿಗೆ ಪ್ರವೇಶ ನಿರ್ಬಂಧಿಸಿದ್ದ ಹಲವು ದೇವಾಲಯಗಳ ಬಗ್ಗೆ ಮಾಹಿತಿ ವೈರಲ್ ಆಗಿತ್ತು. ಆದರೆ ಕೋಲ್ಕತ್ತಾದಲ್ಲಿ ಶಬರಿಮಲೆ ಮಾದರಿಯ ದೇವಾಲಯವೊಂದಿದ್ದು, ಅಲ್ಲಿನ ಮುಖ್ಯ ದೇವತೆ ಕಾಳಿಯಾಗಿದ್ದರೂ ಮಹಿಳೆಯರಿಗೆ ನೋ ಎಂಟ್ರಿ ಬೋರ್ಡ್ ಹಾಕಿದೆ.
ಬರ್ಬಮ್ ಜಿಲ್ಲೆಯ 34 ವರ್ಷಗಳ ಹಿಂದೆ ತರಾಪಿತ್ ನ ಅರ್ಚಕರು ಸ್ಥಾಪಿಸಿದ ವಿಗ್ರಹದಕ್ಕೆ ಆರಂಭದಿಂದಲೂ ಪೆಂಡಾಲ್ ಪ್ರವೇಶಿಸುವುದಕ್ಕೆ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿದೆ. ಪೆಂಡಾಲ್ ನ್ನು ಮಹಿಳೆಯರು ಪ್ರವೇಶಿಸಿದರೆ ಈ ಪ್ರದೇಶದಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತವೆ ಈ ಹಿನ್ನೆಲೆಯಲ್ಲಿ ಇದೇ ಪದ್ಧತಿಯನ್ನು ಮುಂದುವರೆಸುತ್ತೇವೆ ಎಂದು ಚೆಟ್ಲಾ ಪ್ರದೀಪ್ ಸಂಘ ಪೂಜಾ ಸಮಿತಿಯವರು ಹೇಳಿದ್ದಾರೆ.
ನಮ್ಮ ಪೂಜಾ ಸಮಿತಿಯಲ್ಲೂ ಮಹಿಳೆಯರಿದ್ದಾರೆ. ಅವರು ಪ್ರಸಾದ ತಯಾರಿಸಿ ಭಕ್ತಾದಿಗಳಿಗೆ ವಿತರಿಸುತ್ತಾರೆ. ಆದರೆ ಅವರ್ಯಾರೂ ಪೆಂಡಾಲ್ ನ್ನು ಪ್ರವೇಶಿಸುವುದಿಲ್ಲ. 34 ವರ್ಷಗಳಿಂದ ಬಂದ ಆಚರಣೆಯನ್ನು ಮುರಿಯುವುದಿಲ್ಲ ಎಂದು ಸಮಿತಿಯ ಸದಸ್ಯರು ಹೇಳಿದ್ದಾರೆ.
ಈ ಪದ್ಧತಿಯನ್ನು ಇಂಡಾಲಜಿಸ್ಟ್ ನಿರಿಸುಂಗಾ ಪ್ರಸಾದ್ ಭಾದುರಿ ಖಂಡಿಸಿದ್ದು, ಕಾಳಿ ಮಂದಿರಕ್ಕೆ ಮಹಿಳೆಯರ ಪ್ರವೇಶ ಇಲ್ಲ ಎಂದರೆ ದೇವಿಯನ್ನು ಏಕೆ ಪೂಜಿಸಬೇಕು? ಎಂದು ಪ್ರಶ್ನಿಸಿದ್ದಾರೆ, ಮಹಿಳೆಯರನ್ನು ಕಾಳಿ ಮಂದಿರದಲ್ಲಿ ಬಿಡಬಾರದು ಎಂಬುದಕ್ಕೆ ಯಾವುದೇ ಧರ್ಮ ಗ್ರಂಥಗಳ ಆಧಾರವೂ ಇಲ್ಲ ಎಂದು ಬಾಧುರಿ ಹೇಳಿದ್ದಾರೆ. ಸಂಘಟನೆಯ ನಿರ್ಧಾರವನ್ನು ಹಲವು ವಿದ್ವಾಂಸರೂ ಖಂಡಿಸಿದ್ದು, ಮಹಿಳೆಯರು ಮಂದಿರವನ್ನು ಪ್ರವೇಶಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.