ದೇಶ

ಆದಾಯ ವೃದ್ದಿಗಾಗಿ 5000 ಕುಟುಂಬಗಳಿಗೆ ಗೋವುಗಳ ವಿತರಿಸಲು ಮುಂದಾದ ತ್ರಿಪುರಾ ಸಿಎಂ!

Raghavendra Adiga
ಅಗರ್ತಲಾ(ತ್ರಿಪುರಾ):ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ರಾಜ್ಯದಲ್ಲಿನ ನಿರುದ್ಯೋಗ ಹಾಗೂ ಅಪೌಷ್ಟಿಕತೆ ನಿವಾರಣೆಗಾಗಿ ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ.ಅವರು ರಾಜ್ಯದ ಜನರಿಗೆ ಗೋ ಸಾಕಣೆ ಮಾಡುವ ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ.
ಇದಕ್ಕಾಗಿ ಮುಖ್ಯಮಂತ್ರಿ ದೇಬ್ ತ್ರಿಪುರಾದ 5,000 ಕುಟುಂಬಗಳಿಗೆ ಗೋವನ್ನು ವಿತರಿಸಲು ಮುಂದಾಗಿದ್ದಾರೆ. ಈ ಯೋಜನೆಯಿಂದ ಮುಂದಿನ ಆರು ತಿಂಗಳಲ್ಲಿ ಗೋ ಸಾಕಣೆ ಮಾಡುವ ಕುಟುಂಬಕ್ಕೆಹಣ ಸಂಪಾದನೆ ಮಾಡಲು ಸಹಾಯವಾಗಲಿದೆ. "ನಾನು ಬೃಹತ್ ಕೈಗಾರಿಕೆ ಸ್ಥಾಪನೆಯ ವಿರೋಧಿಯಲ್ಲ. ಆದರೆ 2000 ಜನರ ಉದ್ಯೋಗಕ್ಕಾಗಿ 10,000 ಕೋಟಿ ರು. ಹೂಡಿಕೆ ಮಾಡಬೇಕಿದೆ. ಆದರೆ ನಾನು 10,000 ಗೋಈವನ್ನು 5000 ಕುಟುಂಬಗಳಿಗೆ ನಿಡಿದರೆ ಅವರು ಆರು ತಿಂಗಳಿನಲ್ಲಿ ಇದನ್ನು ಆದಾಯ ಮೂಲವಾಗಿಸಿ ಹಣ ಸಂಪಾದನೆಗೆ ತೊಡಗುತ್ತಾರೆ" ಅವರು ಹೇಳಿದ್ದಾರೆ.
ಅವರು ತಮ್ಮ ಇತ್ತೀಚಿನ ಹೇಳಿಕೆಯೊಂದರಲ್ಲಿ ತಾವೂ ಸಹ ತಮ್ಮ ಮನೆಯಲ್ಲಿ ಗೋ ಸಾಕಣೆ ಪ್ರಾರಂಭಿಸುವುದಾಗಿ ಹೇಳಿದ್ದರು. ಅಲ್ಲದೆ ತಮ್ಮ ಕುಟುಂಬದವರನ್ನು ಸಹ ಇದರಲ್ಲಿ ತೊಡಗಿಸಿಕೊಂಡು ಹಾಲು, ಹೈನೋತ್ಪನ್ನ ಉಪಯೋಗ ಮಾಡುವುದಾಗಿ ಘೋಷಿಸಿದ್ದರು.
"ತಾವು ಗೋ ಸಾಕಣೆ ಮಾಡುವುದರಿಂದ ತ್ರಿಪುರಾ ಜನತೆಗೆ ನಮ್ಮ ಕುಟುಂಬ ಮಾದರಿಯಾಗಲಿದೆ. ಅಲ್ಲದೆ ರಾಜ್ಯದಲ್ಲಿ ಅಪೌಷ್ಟಿಕತೆ ಸಮಸ್ಯೆ ಇದ್ದು ಇದರ ವಿರುದ್ಧ ಹೋರಾಡಲು ನಮಗೆ ಸಹಕಾರಿಯಾಗಲಿದೆ." ಅವರು ಹೇಳಿದರು.
ಬಿಪ್ಲಬ್  ಇಂತಹಾ ಹೇಳಿಕೆ ನಿಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಹ ಅವರು ಪದವೀಧರರು ಹಸುಗಳನ್ನು ಸಾಕಣೆ ಮಾಡಬೇಕು. ಸರ್ಕಾರಿ ಕೆಲಸಗಳಿಗಾಗಿ ಅಲೆಯುವ ಬದಲು ಪಾನ್ ಶಾಪ್ ತೆರೆಯಬಹುದು ಎಮ್ದೆನ್ನುವ ಮೂಲಕ ವಿವಾದಕ್ಕೆ ಈಡಾಗಿದ್ದರು. ಅಲ್ಲದೆ ಮೆಕ್ಯಾನಿಕಲ್ ಇಂಜಿನಿಯರ್ ಗಳು ಸಿವಿಲ್ ಸರ್ವೀಸ್ ಗೆ ತೆರಳಬಾರದು, ಸಿವಿಲ್ ಇಂಜಿನಿಯರ್ ಗಳು ಂಆತ್ರ ಇದನ್ನು ಮಾಡಬೇಕು ಎನ್ನುವ ಮೂಲಕ ಮತ್ತೆ ವಿವಾದಕ್ಕೆ ಈಡಾಗಿದ್ದರು.
SCROLL FOR NEXT