ದೇಶ

ದೀಪಾವಳಿಗೆ ಮುನ್ನವೇ 'ಅಪಾಯಕಾರಿ' ಮಟ್ಟ ತಲುಪಿದ ದೆಹಲಿ ವಾಯುಗುಣ!

Raghavendra Adiga
ನವದೆಹಲಿ: ದೀಪಾವಳಿಗೆ ಒಂದು ದಿನದ ಮುನ್ನವೇ ದೆಹಲಿ ವಾಯುಮಾಲಿನ್ಯ ಮಟ್ಟ ಮಿತಿ ಮೀರಿದ್ದು ವಾಯು ಗುಣಮಟ್ಟ ಹದಗೆಟ್ಟಿದೆ.
ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (ಎಸ್ಎಎಫ್ಆರ್) ಮಂಗಳವಾರ ಸೆಂಟರ್-ರನ್ ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಇಂಡೆಕ್ಸ್ (ಎಕ್ಯೂಐ) ಬಿಡುಗಡೆಗೊಳಿಸಿದ್ದು ಇದರಲ್ಲಿ ನಗರದ ಕೆಲ ಭಾಗಗಳು ಉಸಿರಾಟಕ್ಕೆ ಸಹ ಅತೀವವಾದ ಅಪಾಯಕಾರಿ ಮಟ್ಟದಲ್ಲಿರುವುದನ್ನು ತೋರಿಸುತ್ತಿದೆ.
ದೆಹಲಿಯ ಎಕ್ಯೂಐ 449ಕ್ಕೆ ತಲುಪಿದೆ ಚಾಂದಿನಿ ಚೌಕ್ ನ ಸುತ್ತಲಿನ ಪ್ರದೇಶದಲ್ಲಿ ಪಿಎಂ 10ರ ಮಟ್ಟದ ವಾಯು ಗುಣಮಟ್ಟವಿದ್ದು 437 ಎಕ್ಯೂಐ ಹೊಂದಿದೆ.ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್  3 ಮತ್ತು ದೆಹಲಿ ಯೂನಿವರ್ಸಿಟಿ ಪ್ರದೇಶಗಳಲ್ಲಿ 
425, 470 ಹಾಗೂ 396 ಎಕ್ಯೂಐ ದಾಖಲಾಗಿದೆ.
ದೆಹಲಿ ವಾಯು ಗುಣಮಟ್ಟ ತೀರಾ ಕೆಳಮಟ್ಟದಲ್ಲಿದ್ದು ಗಾಲೀಯಲ್ಲಿನ ಹೊಗೆ ಹಾಗೂ ಭಾರೀ ಮಟ್ಟದ ಧೂಳಿನ ಕಣಗಳು ಉಸಿರಾಟ, ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಹಿಗಾಗಿ ಈ ದೀಪಾವಳಿಯಲ್ಲಿ ಪಟಾಕಿ ಹಚ್ಚುವದನ್ನು ನಿಷೇಧಿಸಬೇಕೆಂದು ಕೂಗು ಎದ್ದಿದೆ. 
ದೆಹಲಿಯಲ್ಲಿ ಹವಾಮಾನವು ಹಗಲಿನಮೇಲೆ 26 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ರಾತ್ರಿ ಸಮಯ ತಾಪಮಾನವು 15 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ದೆಹಲಿಯಲ್ಲಿ 68 ಪ್ರತಿಶತ ಗಾಳಿಯ ಆರ್ದ್ರತ ಇರುತ್ತದೆ.ಹಬ್ಬದ ಋತುವಿನ ಕಾರ ಹೆಚ್ಚಿನ ಮಾಲಿನ್ಯ, ಹೆಚಿನ ವಾಹನಗಳು, ಗಾಳಿಯ ಗುಣಮಟ್ಟವನ್ನು ಹದಗೆಡಿಸಿದೆ ಎಂದು ನಂಬಲಾಗಿದೆ.
SCROLL FOR NEXT