ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ 
ದೇಶ

ಅಹಮದಾಬಾದ್‌ಗೆ ಕರ್ಣವತಿ ಹೆಸರಿಡಲು ಸಿದ್ಧ: ಗುಜರಾತ್ ಸರ್ಕಾರ

ಗುಜರಾತಿನ ಅಹಮದಾಬಾದ್ ನಗರವನ್ನು ಕರ್ಣವತಿ ಎಂದು ಹೆಸರು ಬದಲಾವಣೆ ಮಾಡಲು ಸಿದ್ಧವಿರುವುದಾಗಿ ಗುಜರಾತ್ ಸರ್ಕಾರ ಹೇಳಿದೆ.

ಅಹಮದಾಬಾದ್ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರು ನಾಮಕರಣ ಮಾಡಿದ ಬೆನ್ನಲ್ಲೇ, ಗುಜರಾತಿನ ಅಹಮದಾಬಾದ್ ನಗರವನ್ನು ಕರ್ಣವತಿ ಎಂದು  ಹೆಸರು ಬದಲಾವಣೆ ಮಾಡಲು ಸಿದ್ಧವಿರುವುದಾಗಿ ಗುಜರಾತ್ ಸರ್ಕಾರ ಹೇಳಿದೆ.

ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್,   ಕಾನೂನು ಅಡಚಣೆಗಳು ಎದುರಾದರೆ  ಅಗತ್ಯವಾದ ಬೆಂಬಲ ಪಡೆದು ಅಹಮದಾಬಾದ್ ನಗರದ ಹೆಸರನ್ನು  ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಅಹಮದಾಬಾದಿಗೆ ಕರ್ಣವತಿ ಎಂದು ಮರುನಾಮಕರಣ ಮಾಡಬೇಕೆಂದು ಜನರು ಬಯಸುತ್ತಿದ್ದಾರೆ. ಒಂದು ವೇಳೆ ಎಲ್ಲಾ ಕಾನೂನು ತೂಡಕುಗಳು ನಿವಾರಣೆಯಾದರೆ ಹೆಸರು ಬದಲಾವಣೆ ಮಾಡಲು ಸದಾ ಸಿದ್ದರಿದ್ದೇವೆ ಎಂದರು.

 ಕ್ರಿ. ಶ. 11 ನೇ ಶತಮಾನದಲ್ಲಿ ಚಾಲುಕ್ಯ ದೊರೆ  ಕರ್ಣ ಸಬರಿಮತಿ ನದಿ ದಂಡೆಯ ಮೇಲೆ ಕರ್ಣವತಿ ನಗರವನ್ನು ಸ್ಥಾಪಿಸಿದ್ದರು.  ಆದರೆ, ಸುಲ್ತಾನ ಅಹಮದ್ ಶಾ ಕ್ರಿ,ಶ. 1411ರಲ್ಲಿ ಕರ್ಣವತಿ ನಗರದ ಹೆಸರು ಬದಲಾಯಿಸಿ ಅಹಮದಾಬಾದ್ ಎಂದು  ಮರುನಾಮಕರಣ ಮಾಡಿದ್ದರು.

ಅಹಮದಾಬಾದ್ ನಗರದ ಹೆಸರು ಬದಲಾವಣೆ ಮಾಡುವ  ವಿಚಾರ ಆಡಳಿತ ರೂಢ ಬಿಜೆಪಿ ಸರ್ಕಾರದ  ರಾಜಕೀಯ ಗಿಮ್ಮಿಕ್ ಎಂದು ಗುಜರಾತ್  ಕಾಂಗ್ರೆಸ್ ಘಟಕದ ವಕ್ತಾರ ಮನೀಷ್ ದೋಷಿ ಆರೋಪಿಸಿದ್ದಾರೆ.

ಹಿಂದೂಗಳ ಮತ  ಪಡೆಯುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ, ಅಹಮದಾಬಾದ್ ನಗರವನ್ನು ಕರ್ಣವತಿ ನಗರ ಎಂದು ಮರು ನಾಮಕರಣ ಮಾಡುವ ನಾಟಕವಾಡುತ್ತಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!