ರಾಜಾ ಸಿಂಗ್ 
ದೇಶ

ಪಕ್ಷ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು 'ಭಾಗ್ಯನಗರ'ವಾಗಿ ಬದಲಾವಣೆ: ಬಿಜೆಪಿ ಶಾಸಕ

2018ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೇ ಹೈದರಾಬಾದ್ ಗೆ ಭಾಗ್ಯನಗರ ಎಂದು ಹೆಸರು ಬದಲಾಯಿಸುವುದಾಗಿ ...

ಹೈದರಾಬಾದ್: 2018ರ  ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೇ ಹೈದರಾಬಾದ್ ಗೆ ಭಾಗ್ಯನಗರ ಎಂದು ಹೆಸರು ಬದಲಾಯಿಸುವುದಾಗಿ ಘೋಷ ಮಹಲ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಜಾಸಿಂಗ್, ಕೇವಲ ಹೈದರಾಬಾದ್ ಮಾತ್ರವಲ್ಲದೇ ಸಿಕಂದರಾಬಾದ್ ಮತ್ತು ಕರೀಮ್ ನಗರಗಳ ಹೆಸರನ್ನು  ಬಿಜೆಪಿ ಬದಲಾವಣೆ ಮಾಡಲಿದೆ ಎಂದು ಹೇಳಿದ್ದಾರೆ.
ಈ ಮೊದಲು ಹೈದರಾಬಾದ್ ಭಾಗ್ಯನಗರವಾಗಿತ್ತು, 1590 ರಲ್ಲಿ ಕ್ವಿಲ್ ಕುತುಬ್ ಷಾ ಆಗಮಿಸಿ ಭಾಗ್ಯನಗರವನ್ನು ಹೈದಾರಾಬಾದ್ ಎಂಬುದಾಗಿ ಬದಲಾಯಿಸಿದ. ಆ ವೇಳೆ ಹಲವು ಹಿಂದಗಳ ಮೇಲೆ ದಾಳಿ ನಡೆಯಿತು, ಹಲವು  ದೇವಾಲಯಗಳು ನಾಶವಾದವು . ಹೀಗಾಗಿ ನಾವು ಹೈದರಾಬಾದ್ ಗೆ ಮರು ನಾಮಕರಣ ಮಾಡುವ ಯೋಜನೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಈ ಬಾರಿ ಬಿಜೆಪಿ ಬಹುಮತ ಪಡೆದು ಅಧಿಕಾರ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT