ಗ್ಯಾಸ್ ಸಿಲಿಂಡರ್ 
ದೇಶ

ಜೇಬನ್ನು ಸುಡಲಿದೆ ಅಡುಗೆ ಅನಿಲ: ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 2 ರೂ. ಹೆಚ್ಚಳ!

ಸರ್ಕಾರವು ಎಲ್ ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ಗಳನ್ನು ಹೆಚ್ಚಳ ಮಾಡಿದ ತರುವಾಯ ದೇಶೀಯ ಅಡುಗೆ ಅನಿಲ ಎಲ್ ಪಿಜಿ ಸಿಲೆಂಡರ್ ಗಳ ಬೆಲೆಯಲ್ಲಿ ರೂ 2ರಷ್ಟು ಹೆಚ್ಚಳ ಮಾಡಿದೆ.

ನವದೆಹಲಿ: ಸರ್ಕಾರವು ಎಲ್ ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ಗಳನ್ನು ಹೆಚ್ಚಳ ಮಾಡಿದ ತರುವಾಯ ದೇಶೀಯ ಅಡುಗೆ ಅನಿಲ ಎಲ್ ಪಿಜಿ ಸಿಲೆಂಡರ್ ಗಳ ಬೆಲೆಯಲ್ಲಿ ರೂ 2ರಷ್ಟು ಹೆಚ್ಚಳ ಮಾಡಿದೆ.
ದೆಹಲಿಯಲ್ಲಿ 14.2 ಕೆ.ಜಿ.ಸಬ್ಸಿಸ್ಡಿ ಸಹಿತ ಸಿಲೆಂಡರ್ ಬೆಲೆ  ರೂ 505.34ರಿಂದ ರೂ. 507.42 ಆಗಿದೆ. ಕೇಂದ್ರ ಇಂಧನ ಸಚಿವಾಲಯದ ಆದೇಶವನ್ನು ಅನುಸರಿಸಿ ಈ ಹೆಚ್ಚಳ ಮಾಡಲಾಗಿದೆ.
2017 ರ ಸೆಪ್ಟೆಂಬರ್ ನಲ್ಲಿ 14.2 ಕೆ.ಜಿ ಸಿಲಿಂಡರ್ ಮತ್ತು 5 ಕೆಜಿ ಸಿಲಿಂಡರ್ ಗಳಿಗೆ ಗೆ ಸ್ಥಳೀಯ ಎಲ್ ಪಿಜಿ ವಿತರಕರು ಕ್ರಮವಾಗಿ 48.89 ರೂ. ಮತ್ತು 24.20 ರೂ. ಕಮಿಷನ್ ಪಡೆಯಲಿದ್ದಾರೆ.
ಇದು ಈ ತಿಂಗಳಲ್ಲಿ ಎಲ್ ಪಿಜಿ ಗ್ಯಾಸ್ ದರದಲ್ಲಿ ಆಗುತ್ತಿರುವ ಎರಡನೇ ಬಾರಿಯ ಏರಿಕೆಯಾಗಿದೆ. ಇದಕ್ಕೆ ಹಿಂದೆ ಮೂಲ ಬೆಲೆಗೆ ತೆರಿಗೆ ಹೆಚ್ಚಳವಾಗಿದ್ದ ಕಾರಣ ನವೆಂಬರ್ 1ರಂದು ಸಿಲೆಂಡರ್ ಒಂದಕ್ಕೆ 2.94 ರೂ. ಹೆಚ್ಚಳ ಮಾಡಲಾಗಿತ್ತು.ಜಿಎಸ್ಟಿ ತೆರಿಗೆ ದರ ಹೆಚ್ಚಳವಾಗಿರುವ ಕಾರಣ ಜೂನ್ ನಿಂದ ಎಲ್ ಪಿಜಿ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಪ್ರತಿ ತಿಂಗಳೂ ಏರಿಕೆಯಾಗಿದೆ. ಇದುವರೆಗೆ  ಒಟ್ಟು ಬೆಲೆ 16.21 ರೂ.ಏರಿಕೆ ದಾಖಲಾಗಿದೆ.
ಇನ್ನು ಮುಂಬೈನಲ್ಲಿ 14.2 ಕೆ.ಜಿ. ಅಡಿಗೆ ಅನಿಲ ಸಿಲೆಂಡರ್ ಬೆಲೆ  ಈಗ 505.05 ರೂ. ಆಗಿದ್ದರೆ ಕೋಲ್ಕತಾದಲ್ಲಿ  510.70 ರೂ. ಚೆನ್ನೈನಲ್ಲಿ 495.39 ರೂ ಇದೆ. ತೆರಿಗೆಗಳು ಹಾಗೂ ಸಾರಿಗೆ ವೆಚ್ಚದ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು, ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್; Video

US-Iran ಶಾಂತಿ ಒಪ್ಪಂದ ನಿರೀಕ್ಷೆ: ಭರ್ಜರಿಯಾಗಿ ಪುಟಿದೆದ್ದ Indian Stock Market, ಸೆನ್ಸೆಕ್ಸ್ 1,695 ಅಂಕಗಳ ಏರಿಕೆ

'ಯೂನಿಕ್ ಪ್ಲೇಯರ್, ಆದ್ರೆ....': ವೈಭವ್ ಸೂರ್ಯವಂಶಿ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು?

ರಾಜ್ಯಸಭೆ ನಾಮಪತ್ರ ವಿವಾದ: ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್‌ಗೆ ಸುಪ್ರೀಂ ಕೋರ್ಟ್‌ ಶಾಕ್, ಪರಿಹಾರಕ್ಕಾಗಿ ECI ಮೊರೆ ಹೋಗುವಂತೆ ಸೂಚನೆ..!

ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಭೇಟಿಯಾದ ಸಿಎಂ DKS: ಮೇಕೆದಾಟು ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಅನುಮತಿಗೆ ಮನವಿ!

SCROLL FOR NEXT