ಮುಂಬೈ: ನರಭಕ್ಷಕ ಹೆಣ್ಣು ಹುಲಿ ಅವನಿ ಗುಂಡೇಟಿಗೆ ಬಲಿಯಾಗಿದ್ದ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಇದೀಗ ತೀವ್ರ ರಕ್ತಸ್ರಾವ ಹಾಗೂ ಹೃದಯಾಘಾತದಿಂದ ಅವನಿ ಸಾವನ್ನಪ್ಪಿದೆ ಎಂದು ವರದಿಗಳು ಹೇಳಿದೆ.
ಅವನಿ ಸಾವಿಗೆ ಮುನ್ನ ಸುಮಾರು ಏಳು ದಿನಗಳಿಂದ ಏನೂ ತಿಂದಿರಲಿಲ್ಲ. ಅದರಿಂದ ಹುಲಿಯ ಹೊಟ್ಟೆ, ಕರುಳಿನಲ್ಲಿ ಗ್ಯಾಸ್ ತುಂಬಿಕೊಂಡಿತ್ತು ಎಂದು ವೈದ್ಯಕೀಯ ಪರೀಕ್ಷಾ ಅವಾದಿ ಹೇಳಿದೆ.
ನರಭಕ್ಷಕನಾಗಿ ಬದಲಾಗಿತ್ತು ಎಂದು ನಂಬಲಾದ ಹೆಣ್ಣು ಹುಲಿ ಅವನಿಯು 13 ಮಂದಿಯನ್ನು ಕೊಂದು ತಿಂದಿತ್ತು. ಈ ಸಂಬಂಧ ಕಳೆದ ಸೆಪ್ಟೆಂಬರ್ ನಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದು ಆದೇಶಿಸಿದ್ದು ಆ ದೇಶದಂತೆ ನವೆಂಬರ್ 2ರಂದು ಮಹಾರಾಷ್ಟ್ರದ ಯಾವತ್ಮಲ್ ಅರಣ್ಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ವಿವಿಧ ಸಂಸ್ಥೆಗಳ ಪಶುವೈದ್ಯರು ನಡೆಸಿದ ಪರೀಕ್ಷೆಯ ಪ್ರಕಾರ,ಹುಲಿಯು ಅಧಿಕ ರಕ್ತಸ್ರಾವ ಹಾಗೂ ಉಸಿರಾಟದ ವೈಫಲ್ಯದಿಂದಾಗಿ ಮರಣಹೊಂದಿದೆ.ಈ ವಿಚಾರವಾಗಿ ಅವಕ್ಲೋಕನ ಮಾಡಿದ ವನ್ಯಜೀವಿ ತಜ್ಞರು ,ಹುಲಿಯ ಹೊಟ್ಟೆಯಲ್ಲಿ ಯಾವುದೇ ಘನ ಆಹಾರ ಪದಾರ್ಥಗಳು ಪತ್ತೆಯಾಗಿಲ್ಲ. ಹೀಗಾಗಿ ಹುಲಿ ಸಾಯುವದಕ್ಕೆ ಸುಮಾರು 4-5 ದಿನಗಳಿಗೆ ಮುನ್ನ ಯಾವ ಬೇಟೆಯಾಡಿಲ್ಲ ಎಂದು ಅರ್ಥೈಸಬಹುದು ಎಂದಿದ್ದಾರೆ.
ಆದರೆ ಹುಲಿಗಳು ಕೆಲವೊಮ್ಮೆ ಒಂದೇ ಬಾರಿಗೆ 25-30 ಕೆಜಿ ಮಾಂಸವನ್ನು ತಿನ್ನುತ್ತವೆ ಮತ್ತು 7 ದಿನಗಳವರೆಗೆ ಮತ್ತೆ ಬೇಟೆಯಾಡುವುದಿಲ್ಲ ಎನ್ನುವುದನ್ನು ಈ ವೇಳೆ ನಾವಿಲ್ಲಿ ಗಮನಿಸಬಹುದು ಎಂದು ಅವರು ಹೇಳಿದ್ದಾರೆ.