ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವ ಅಮಿತ್ ಶಾ 
ದೇಶ

ಛತ್ತೀಸ್ ಗಢ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ, ನಕ್ಸಲ್ ಮುಕ್ತ ಮಾಡುವ ಭರವಸೆ

ಛತ್ತೀಸ್ ಗಢ ವಿಧಾನಸಭೆ ಚುನಾವಣೆಗೆ ಬಿಜೆಪಿ ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರಾಜ್ಯವನ್ನು ನಕ್ಸಲ್...

ರಾಯಪುರ್: ಛತ್ತೀಸ್ ಗಢ ವಿಧಾನಸಭೆ ಚುನಾವಣೆಗೆ ಬಿಜೆಪಿ ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರಾಜ್ಯವನ್ನು ನಕ್ಸಲ್ ಮುಕ್ತಗೊಳಿಸುವ ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ ನೀಡುವ ಭರವಸೆ ನೀಡಿದೆ.
ನಕ್ಸಲ್ ಪೀಡಿತ ರಾಜ್ಯದಲ್ಲಿ ನಾಲ್ಕನೆ ಅವಧಿಗೆ ಅವಕಾಶ ಕೇಳುತ್ತಿರುವ ಬಿಜೆಪಿ, ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಸೇರಿದಂತೆ ರಾಜ್ಯವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುವ ಭರವಸೆ ನೀಡಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಛತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಪಕ್ಷದ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅಮಿತ್ ಶಾ, : ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಸರ್ಕಾರ ಬಹುತೇಕ ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದ್ದು, ಇಂಧನ ಮತ್ತು ಸಿಮೆಂಟ್ ಉತ್ಪಾದನೆಗೆ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಯ ಪಥದತ್ತ ಕೊಂಡೊಯ್ದಿದೆ ಎಂದರು.
ಈ ಹಿಂದೆ ರಾಜ್ಯವನ್ನು ಹಿಂದುಳಿದ(ಬಿಮಾರು) ರಾಜ್ಯ ಎಂದು ಆರೋಪಿಸಲಾಗಿತ್ತು. ಆದರೆ ಛತ್ತೀಸ್ ಗಢ್ ಇಂಧನ ಮತ್ತು ಸಿಮೆಂಟ್ ಉತ್ಪಾದನೆಯ ಕೇಂದ್ರವಾಗಿ ಬೆಳೆದಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

LOP ಅಂದ್ರೆ 'ರಬ್ಬರ್ ಸ್ಟ್ಯಾಂಪ್' ಅಲ್ಲ: CBI ನಿರ್ದೇಶಕರ ಆಯ್ಕೆ ಪ್ರಕ್ರಿಯೆ ವಿರುದ್ಧ ತಿರುಗಿಬಿದ್ದ ರಾಹುಲ್!

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಕೊನೆಗೂ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ; ಜುಲೈ 1 ರಿಂದ ಜಾರಿ

IPL 2026: 82 ರನ್‌ಗಳಿಂದ SRH ಮಣಿಸಿದ Gujarat Titans; RCB ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಗಿಲ್ ಪಡೆ!

ಬಂಗಾಳದಲ್ಲಿ ಶುದ್ಧೀಕರಣ ಶುರು ಮಾಡಿದ ಸಿಎಂ ಸುವೇಂದು: TMC ನೇಮಕ ಮಾಡಿದ್ದ ಗ್ರೂಪ್ ಎ ಶ್ರೇಣಿಯ 232 ಅಧಿಕಾರಿಗಳ ವಜಾ!

ಒಂದೇ ಒಂದು ದಾಳಿ ನಡೆದರೂ ಯುರೇನಿಯಂ ದಾಸ್ತಾನು ಶಸ್ತ್ರಾಸ್ತ್ರ ದರ್ಜೆಗೆ ಸಂವರ್ಧನೆ- ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ!

SCROLL FOR NEXT