ನವದೆಹಲಿ: ಇದೇ ನವೆಂಬರ್ 12ರಿಂದ ಡಿಸೆಂಬರ್ 7ವರೆಗೂ ಯಾವುದೇ ರೀತಿಯ ಮತದಾನೋತ್ತರ ಸಮೀಕ್ಷೆ ನಡೆಸದಂತೆ ಕೇಂದ್ರ ಚುನಾವಣಾ ಆಯೋಗ ನಿಷೇಧ ಹೇರಿದೆ.
ಛತ್ತೀಸ್ ಘಡ, ಮಧ್ಯ ಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮತದಾನೋತ್ತರ ಸಮೀಕ್ಷೆಗಳಿಗೆ ಆಯೋಗ ಸುಮಾರು ಒಂದು ತಿಂಗಳ ನಿಷೇಧ ಹೇರಿದ್ದು, ಚುನಾವಣಾ ಸಮಿತಿ ಶಿಫಾರಸ್ಸಿನಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ಯಾವುದೇ ರೀತಿಯ ಸಮೀಕ್ಷೆಗಳನ್ನು ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಕಟಿಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಇದೇ ನವೆಂಬರ್ 12 ಮತ್ತು 20 ರಂದು ಛತ್ತೀಸ್ ಘಡದಲ್ಲಿ 2 ಹಂತದ ಮತದಾನ ನಡೆಯಲಿದ್ದು, ಆ ಬಳಿಕ ಮಧ್ಯ ಪ್ರದೇಶ ಮತ್ತು ಮಿಜೋರಾಂ ನಲ್ಲಿ ನವೆಂಬರ್ 2ರಂದು ಮತದಾನ ನಡೆಯಲಿದೆ. ಅಂತೆಯೇ ರಾಜಸ್ತಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಡಿಸೆಂಬರ್ ರಂದು ಮತದಾನ ನಡೆಯಲಿದೆ.