ಕಾಂಗ್ರೆಸ್ ರಾಜಕೀಯವು ಒಂದೇ ಕುಟುಂಬದಲ್ಲಿ ಹುಟ್ಟಿ ಅಲ್ಲಿಯೇ ಅಂತ್ಯವಾಗುತ್ತದೆ: ಪ್ರಧಾನಿ ಮೋದಿ
ಕಾಂಗ್ರೆಸ್ ಪಕ್ಷದ ರಾಜಕೀಯವು ಒಂದೇ ಕುಟುಂಬದಿಂದ ಪ್ರಾರಂಬವಾಗಿ ಒಂದೇ ಕುಟುಂಬದಲ್ಲಿ ಅಂತ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಲಾಸ್ಪುರ್: ಕಾಂಗ್ರೆಸ್ ಪಕ್ಷದ ರಾಜಕೀಯವು ಒಂದೇ ಕುಟುಂಬದಿಂದ ಪ್ರಾರಂಬವಾಗಿ ಒಂದೇ ಕುಟುಂಬದಲ್ಲಿ ಅಂತ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಛತ್ತೀಸ್‍ಗಢದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನ ದಿನಕ್ಕೆ ಏರುತ್ತಿದ್ದು ನವೆಂಬರ್ 20ರಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಚಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಛತ್ತೀಸ್‍ಗಢದ ಅಭಿವೃದ್ದಿ ವಿಚಾರಕ್ಕೆ ಬಂದರೆ ಕ್ಲಾಂಗ್ರೆಸ್ ಆಡಳಿತ ಅವಧಿಯಲ್ಲಿ ಅಭಿವೃದ್ದಿ ಅತ್ಯಂತ ನಿಧಾನ ಗತಿಯಲ್ಲಿತ್ತು. ಬಿಜೆಪಿಯ ಅವಧಿಯಲ್ಲಿ ಇದು ವೇಗವನ್ನು ವರ್ಧಿಸಿಕೊಂಡಿದೆ ಎಂದ ಮೋದಿ ರಾಹುಲ್ ಗಾಂಧಿ ಕುರಿತಂತೆ ಮಾತನಾಡಿ ನಮ್ಮ ಸರ್ಕಾರದ ಅಪನಗದೀಕರಣ ಕ್ರಮವನ್ನು ಪ್ರಶ್ನಿಸುವ ತಾಯಿ-ಮಗನ ಜೋಡಿ ಜಾಮೀನಿನ ಮೇಲೆ ಹೊರಗಿದೆ ಎಂದು ಟೀಕಿಸಿದರು.
ಛತ್ತೀಸ್‍ಗಢ ಈ ಮಟ್ಟದಲ್ಲಿ ಅಭಿವೃದ್ದಿ ಸಾಧಿಸಲು ಐವತ್ತು ವರ್ಷ ತೆಗೆದುಕೊಂಡಿದೆ. ಇದೂ ಸಹ ರಾಹುಲ್ ನೇತೃತ್ವ ವಹಿಸಿದ ಕಾಂಗ್ರೆಸ್ ಆಡಳಿತದಲ್ಲಿ. ಏಕೆಂದರೆ ಕಾಂಗ್ರೆಸ್ ನಲ್ಲಿ ಎಂದಿಗೂ ರಾಷ್ಟ್ರಕ್ಕಾಗಿ ದುಡಿಯುವ ನಾಯಕರು ಉದಯಿಸಲಿಲ್ಲ. ಹಾಗೆಯೇ ಕಾಂಗ್ರೆಸ್ ನಲ್ಲಿ ರಾಜಕಾರಣವು ಒಂದು ಕುಟುಂಬದೊಡನೆ ಪ್ರಾರಂಭವಾಗಿ ಅದೇ ಕುಟುಂಬದೊಡನೆ ಕೊನೆಗೊಳ್ಳುತ್ತದೆ. ಆದರೆ ನಮ್ಮ ರಾಜಕಾರಣವು ಬಡವರ ಗುಡಿಅಲಿನಿಂದ ಪ್ರಾರಂಭವಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ..
ಅಲ್ಲದೆ ರಾಹುಲ್ ಅವರ ಹೆಸರನ್ನು ಹೇಳದೆ ಮಾತನಾಡಿದ ಮೋದಿ "ನೋಟ್ ಬ್ಯಾನ್ ನಿಂದಾಗಿ ಜಾಮೀನು ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು ಎನ್ನುವುದನ್ನು ಅವರು ಮರೆಯಬಾರದು ಎಂದರು.
ಭ್ರಷ್ಠಾಚಾರದ ಕುರಿತಂತೆ ಕಾಂಗ್ರೆಸ್ ನತ್ತ ಗುರಿಯಿಟ್ಟ ಪ್ರಧಾನಿಗಳು 1985 ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ನೀಡಿದ್ದ ಹೇಳಿಕೆ ಉಲ್ಲೇಖಿಸಿ ಮಾತನಾಡಿದರು "ಶೋಷಣೆಗೆ ಒಳಗಾದ ಕುಟುಂಬಗಳ ಕಲ್ಯಾಣಕ್ಕಾಗಿ ರೂಪಾಯಿಗೆ 15 ಪೈಸೆ ಮಾತ್ರ ಸರ್ಕಾರದ ವೆಚ್ಚ ನೈಜ ವಾರಸುದಾರರಿಗೆ ತಲುಪಿದೆ. ಉಳಿದ 85 ಪೈಸೆಯನ್ನು ಯಾವ "ಕೈ" ನುಂಗಿ ಹಾಕುದೆ?" ಎಂದು ಪ್ರಶ್ನಿಸಿದ್ದಾರೆ.