ದೇಶ

ಛತ್ತೀಸ್ಗಢ: ಚುನಾವಣೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಐಇಡಿ ಸ್ಫೋಟಿಸಿದ ನಕ್ಸಲರು

Manjula VN
ದಂತೇವಾಡ: ಮಾವೋವಾದಿಗಳ ಬೆದರಿಕೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯ ನಡುವೆ ಛತ್ತೀಸ್ಗಢ ವಿಧಾನಸಭೆಯ ಮೊದಲ ಹಂತದ ಚುನಾವಣೆ ಆರಂಭಗೊಂಡಿದ್ದು, ಚುನಾವಣೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ನಕ್ಸಲರು ದಂತೇವಾಡದಲ್ಲಿ ಐಇಡಿ ಸ್ಫೋಟಿಸಿದ್ದಾರೆ. 
ದಂತೇವಾಡದ ಕಾಟೆಕಲ್ಯಾಣ್ ಬ್ಲಾಕ್ ನಲ್ಲಿರುವ ತುಮಾಕ್ಪಾಲ್ ಕ್ಯಾಂಪ್ ಬಳಿ ನಕ್ಸಲರು 1-2 ಕಿ.ಮೀ ದೂರದಲ್ಲಿ ಐಇಡಿ ಸ್ಫೋಟಿಸಿದ್ದಾರೆಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ. 
ಛತ್ತೀಸ್ಗಢ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ ನಕ್ಸಲ್ ಪೀಡಿತ 8 ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ 31.79 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. 
ಮೊದಲ ಹಂತದಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ ಸ್ಪರ್ಧಿಸಿರುವ ರಾಜನಂದಗಾಂವ್ ಕ್ಷೇತ್ರದ ಮೇಲೆ ಕುತೂಹಲವಿದೆ. ಏಕೆಂದರೆ ಅಲ್ಲಿ ಕಾಂಗ್ರೆಸ್ಸಿನಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ ಕರುಣಾ ಶುಕ್ಲಾ ಅಭ್ಯರ್ಥಿಯಾಗಿದ್ದಾರೆ. 
SCROLL FOR NEXT