ದೇಶ

ವಾರಣಾಸಿಯಲ್ಲಿ ದೇಶದ ಮೊದಲ ಒಳನಾಡು ಬಂದರು ಉದ್ಘಾಟಿಸಿದ ಪ್ರಧಾನಿ ಮೋದಿ

Lingaraj Badiger
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ದೇಶದ ಮೊದಲ ಒಳನಾಡು ಬಂದರನ್ನು ಸೋಮವಾರ ಲೋಕಾರ್ಪಣೆ ಮಾಡಿದರು. 
ದೇಶದಲ್ಲಿ ಸಮುದ್ರ ಮಾರ್ಗದಲ್ಲಿ ಸಾರಿಗೆ ಸಾಮಾನ್ಯ. ಆದರೆ ಇದೀಗ ಒಳನಾಡಿನ ಜಲ ಮಾರ್ಗಗಳ ಸದ್ಬಳಕೆಗೆ ಕೇಂದ್ರ ಸರ್ಕಾರ ಕ್ರಾಂತಿಕಾರಕ ಯೋಜನೆ ರೂಪಿಸಿದ್ದು, ಅದರ ಭಾಗವಾಗಿ ಪ್ರಧಾನಿ ಮೋದಿ ಹಾಗೂ ಬಂದರು ಸಚಿವ ನಿತಿನ್ ಗಡ್ಕರಿ ಅವರು ಇಂದು ಗಂಗಾ ನದಿಯ ಮೇಲೆ  ನಿರ್ಮಾಣಗೊಂಡಿರುವ ಒಳನಾಡು ಬಂದರನ್ನು ಉದ್ಘಾಟಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಒಳನಾಡು ಬಂದರು ಉತ್ತರ ಪ್ರದೇಶದ ಹಾಲ್ದಿಯಾ ದಿಂದ ಆರಂಭಗೊಂಡು ಪಶ್ಚಿಮ ಬಂಗಾಳದವರೆಗೆ ಸಾಗುತ್ತದೆ.
ಅಕ್ಟೋಬರ್ 30ರಂದು ಪೆಪ್ಸಿಕೋ ಇಂಡಿಯಾಗೆ ಸೇರಿದ ಭಾರತದ ಮೊಟ್ಟ ಮೊದಲ ಒಳನಾಡು ಸರಕು ಹಡಗು, ಸರಕು ತುಂಬಿಕೊಂಡು ಕೋಲ್ಕತ್ತಾದಿಂದ ಸಾಗಿ ಬಂದಿದೆ. ಇಂದು ಈ ಹಡಗು​ ವಾರಣಾಸಿಗೆ ಬಂದು ತಲುಪಿದ್ದು, ಮೋದಿ ಇದನ್ನು ಬರಮಾಡಿಕೊಂಡರು. 
ಈ ಮಾರ್ಗ ರಾಷ್ಟ್ರೀಯ ಜಲ ಮಾರ್ಗ-1 ಎಂದು ಹೆಸರು ಪಡೆದಿದ್ದು, ಭಾರತ ತನ್ನೆಲ್ಲ ಒಳ ನಾಡಿನ ಜಲ ಮಾರ್ಗಗಳನ್ನು ಬಳಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
SCROLL FOR NEXT