ದೇಶ

ಇನ್ಮುಂದೆ ಚಾಲಕರಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ವಾಹನ ದಾಖಲಾತಿ ಕೊಂಡೊಯ್ಯಲು ಅವಕಾಶ

Sumana Upadhyaya

ನವದೆಹಲಿ: ಕೇಂದ್ರ ಮೋಟಾರು ವಾಹನ ಕಾಯ್ದೆಗೆ ಕೆಲವು ತಿದ್ದುಪಡಿ ತಂದು ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯ ಜಾರಿಗೆ ತಂದಿದೆ.

ಹೊಸ ಕಾನೂನಿನಡಿಯಲ್ಲಿ, 8 ವರ್ಷದವರೆಗಿನ ಸಾಗಾಟ ವಾಹನಗಳಿಗೆ ವರ್ಷಕ್ಕೆ 2 ಬಾರಿ ಫಿಟ್ ನೆಸ್  ಸರ್ಟಿಫಿಕೇಟ್ ನವೀಕರಣ, 8 ವರ್ಷಕ್ಕಿಂತ ಹೆಚ್ಚಾದ ವಾಹನಗಳಿಗೆ ವರ್ಷಕ್ಕೆ ಒಂದು ಬಾರಿ ನವೀಕರಣ ಹೊಂದಿರುತ್ತದೆ. ಹೊಸ ವಾಹನಗಳಿಗೆ ದಾಖಲಾತಿ ಸಂದರ್ಭದಲ್ಲಿ ಯಾವುದೇ ಫಿಟ್ ನೆಸ್ ಸರ್ಟಿಫಿಕೇಟ್ ನ ಅವಶ್ಯಕತೆಯಿರುವುದಿಲ್ಲ. ಅವುಗಳಿಗೆ ದಾಖಲಾತಿಯಾದ ಎರಡು ವರ್ಷಗಳ ನಂತರ ಫಿಟ್ ನೆಸ್ ಸರ್ಟಿಫಿಕೇಟ್ ಮಾಡಿಸಿಕೊಂಡರೆ ಸಾಕಾಗುತ್ತದೆ ಎಂದು ಕೇಂದ್ರ ಸಾರಿಗೆ ಸಚಿವಾಲಯದ ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸಚಿವಾಲಯದ ಅಧಿಕಾರಿಗಳು ಹೇಳುವ ಪ್ರಕಾರ, ಪ್ರಾಧಿಕಾರದ ಅಗತ್ಯಗಳಿಗೆ ಈ ಕ್ರಮದಿಂದ ನೆರವಾಗುತ್ತದೆ, ಭ್ರಷ್ಟಾಚಾರವನ್ನು ತಡೆಗಟ್ಟಿ ಸಾರಿಗೆ ಇಲಾಖೆಯ ದಕ್ಷತೆಯನ್ನು ಹೆಚ್ಚಿಸುತ್ತದೆ.

138ಬಿ ನಿಯಮಕ್ಕೆ ಸಂಬಂಧಪಟ್ಟಂತೆ ತಿದ್ದುಪಡಿಯಲ್ಲಿ, ಸಾಮಾನುಗಳನ್ನು ಹೊತ್ತೊಯ್ಯುವ ವಾಹನಗಳನ್ನು ಕಾರ್ಗೊ ಹೊತ್ತೊಯ್ಯಲು ಅನುವು ಮಾಡಿಕೊಡಲಾಗುವುದಿಲ್ಲ. ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಲು ಕೂಡ ತಿದ್ದುಪಡಿ ಸಹಾಯ ಮಾಡುತ್ತದೆ.

ದಾಖಲಾತಿ, ಇನ್ಸೂರೆನ್ಸ್, ಫಿಟ್ ನೆಸ್, ಅನುಮತಿ, ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಚಾಲನಾ ಪರವಾನಗಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಮಾಡಲಾಗುತ್ತದೆ 138ನೇ ತಿದ್ದುಪಡಿ ಕಾನೂನು ಹೇಳುತ್ತದೆ.

ತಿದ್ದುಪಡಿಯಿಂದಾಗಿ ಇನ್ನು ಮುಂದೆ ವಾಹನ ಚಾಲನೆ ಮಾಡುವಾಗ ದಾಖಲೆಗಳನ್ನು ಹೊತ್ತೊಯ್ಯಬೇಕಾಗಿಲ್ಲ. ಐಟಿ ಕಾಯ್ದೆ ಪ್ರಕಾರ, ದಾಖಲಾತಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ವಿವರಿಸಲಾಗಿದ್ದರೂ ಕೂಡ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಖಲಾತಿ ರೂಪದಲ್ಲಿ ಕೇಳುತ್ತಾರೆ. ಇನ್ನು ಮುಂದೆ ಈ ಪದ್ಧತಿಯಿರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

SCROLL FOR NEXT