ಸಂಗ್ರಹ ಚಿತ್ರ 
ದೇಶ

ಚೆನ್ನೈ: ಕಾರಿನಡಿ ಸಿಕ್ಕು ತಾನು ಸಾಯುವುದಕ್ಕೆ ಮುನ್ನ ಪತ್ನಿ, ಮಗಳ ಜೀವ ರಕ್ಷಿಸಿದ!

ಸಂಬಂಧಿಯೊಬ್ಬರ ಶವಸಂಸ್ಕಾರಕ್ಕೆಂದು ಬಂದಿದ್ದ ವ್ಯಕ್ತಿ ರಸ್ತೆ ಅಪಘಾತಕ್ಕೆ ಸಿಕ್ಕು ತಾನೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ಚೆನ್ನೈ: ಸಂಬಂಧಿಯೊಬ್ಬರ ಶವಸಂಸ್ಕಾರಕ್ಕೆಂದು ಬಂದಿದ್ದ ವ್ಯಕ್ತಿ ರಸ್ತೆ ಅಪಘಾತಕ್ಕೆ ಸಿಕ್ಕು ತಾನೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ದಿಂಡಿಗಲ್ ಮೂಲದ ಉಬಯ್ಯಾತುಲ್ಲಾ (38) ಎನ್ನುವಾತನೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ವಿಶೇಹವೆಂದರೆ ಉಬಯ್ಯಾತುಲ್ಲಾ  ಕಾರಿನ ಚಕ್ರಕ್ಕೆ ಸಿಕ್ಕು ತಾನು ಸಾಯುವುದಕ್ಕೆ ಒಂದೇ ಕ್ಷಣದ ಮುನ್ನ ತನ್ನ ಹಿಂಬಾಲಿಸಿ ಬರುತ್ತಿದ್ದ ಪತ್ನಿ ಹಾಗೂ ಮಗಳನ್ನು ದೂರಕ್ಕೆ ತಳ್ಳುವ ಮೂಲಕ ಅವರ ಜೀವ ರಕ್ಷಿಸಿದ್ದಾನೆ.
ಉಬಯ್ಯಾತುಲ್ಲಾ  ಹಾಗೂ ಅವರ ಕುಟುಂಬ ಬುಧವಾರ ಬೆಳಿಗ್ಗೆ ಕೊಯಂವೀಡು ತಲುಪಿದ್ದಾರೆ.ಅವರು ತಮಿಳುನಾಡು ಹೌಸಿಂಗ್ ಬೋರ್ಡ್ ನಿಂದ ತಿರುಮಂಗಲಂ ಜಂಕ್ಷನ್ ಗೆ ತೆರಳುವ ಬಸ್ ಏರಲು ಬರುತ್ತಿದ್ದಾಗ ಅಪಘಾತ ನಡೆದಿದೆ.
ಅವರು ರಸ್ತೆ ಬದಿಯಿಂದ ಬರುತ್ತಿರುವಾಗ ಅಂಬತ್ತೂರ್ ಎಸ್ಟೇಟ್ ಕಡೆಯಿಂದ ವೇಗವಾಗಿ ಬಂದಿದ್ದ ಸ್ಕಾರ್ಪಿಯೋ ಕಾರ್ ಇನ್ನೊಂದು ಕಾರ್ ಗೆ ಗುದ್ದಿದೆ. ಆಗ ಚಾಲಕ ಕಾರ್ ನ ನಿಯಂತ್ರಣ ಕಳೆದುಕೊಂಡಿದ್ದಾನೆ. ಅದೇ ವೇಳೆ ಉಬಯ್ಯಾತುಲ್ಲಾ  ಕಾರ್ ಇನ್ನೇನು ನಮ್ಮ ಮೇಲೆ ಹರಿದು ಹೋಗಲಿದೆ ಎನ್ನುವುದನ್ನು ಅರಿತು ಹತ್ತಿರದಲ್ಲಿದ್ದ ಪತ್ನಿ, ಮಗಳನ್ನು ದೂರ ತಳ್ಳಿದ್ದಾರೆ.
ರಸ್ತೆ ಮೇಲಿದ್ದ ಕಲ್ಲಿಗೆ ಗುದ್ದಿದ ಬಳಿಕ ಕಾರ್ ನಿಯಂತ್ರಣಕ್ಕೆ ಬಂದಿದೆ."ವೇಗವಾಗಿ ಬಂದ ಸ್ಕಾರ್ಪಿಯೋ ಕಾರ್ ನೋಡಿ ನಾನು ಅಪಘಾತವಾಗುವುದನ್ನು ತಪ್ಪಿಸಲು ನನ್ನ ಕಾರನ್ನು ನಿಲ್ಲಿಸಿದೆ, ಕಾರು ನನ್ನ ಕಾರಿನ ಬಾಗಿಲಿಗೆ ಕುತ್ಟಿದ್ದಲ್ಲದೆ ರಸ್ತೆ ಬದಿಯಲ್ಲಿದ್ದ ವ್ಯಕ್ತಿಗೆ ಗುದ್ದಿ ಬಳಿಕ ರಸ್ತೆಯಲ್ಲಿದ್ದ ಕಲ್ಲುಗಳಿಗೆ ಹೊಡೆದು ನಿಂತಿತು" ಅಪಘಾತವನ್ನು ಪ್ರತ್ಯಕ್ಷ ಅನುಭವಿಸಿದ ಕಾರು ಚಾಲಕ ರವಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ