ನಾಮಪತ್ರ ಸಲ್ಲಿಕೆ ಮಾಡಿದ ಕೆಸಿಆರ್ 
ದೇಶ

20 ಕೋಟಿಗೂ ಹೆಚ್ಚು ಆಸ್ತಿಯ ಒಡೆಯನಾದರೂ, ತೆಲಂಗಾಣ ಸಿಎಂ ಬಳಿ ಸ್ವಂತಕ್ಕೊಂದು ಕಾರಿಲ್ಲ!

20 ಕೋಟಿ ರೂಗೂ ಅಧಿಕ ಆಸ್ತಿಯ ಒಡೆಯನಾದರೂ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ಬಳಿ ಸ್ವಂತಕ್ಕೊಂದು ಕಾರು ಕೂಡ ಇಲ್ಲವಂತೆ....

ಹೈದರಾಬಾದ್: 20 ಕೋಟಿ ರೂಗೂ ಅಧಿಕ ಆಸ್ತಿಯ ಒಡೆಯನಾದರೂ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ಬಳಿ ಸ್ವಂತಕ್ಕೊಂದು ಕಾರು ಕೂಡ ಇಲ್ಲವಂತೆ....
ಅರೆ ಇದು ನಾವು ಹೇಳುತ್ತಿರುವುದಲ್ಲ.. ಸ್ವತಃ ಅವರೇ ತಮಗೆ ಸ್ವಂತ ಕಾರಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ. ಹೌದು.. ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಇಂದು ಗಜ್ವೆಲ್ ವಿಧಾನಸಭಾ ಕ್ಷೇತ್ರದಿಂದ ಕೆಸಿಆರ್ ನಾಮಪತ್ರ ಸಲ್ಲಿಕೆ ಮಾಡಿದರು. ಜಿ್ಲಾಧಿಕಾರಿ ಸ್ಮಿತಾ ಸಬರ್ವಾಲ್ ಅವರಿಗೆ ಕೆಸಿಆರ್ ನಾಮಪತ್ರದೊಂದಿಗೆ ತಮ್ಮ ಆಸ್ತಿ ಘೋಷಣೆ ಕುರಿತ ಪ್ರಮಾಣಪತ್ರವನ್ನೂ ಸಲ್ಲಿಕೆ ಮಾಡಿದರು. ಈ ವೇಳೆ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿರುವ ಕೆಸಿಆರ್ ತಮ್ಮ ಬಳಿ ಒಟ್ಟು 22.61 ಕೋಟಿ ರೂ ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಬಳಿ ಸುಮಾರು 16 ಎಕರೆ ಕೃಷಿ ಭೂಮಿ ಇದ್ದು, ಸ್ವಂತ ಮನೆ ಇದೆ ಎಂದು ಹೇಳಿಕೊಂಡಿದ್ದಾರೆ.
ಕಳೆದ ವರ್ಷಕ್ಕಿಂತೆ ಕೆಸಿಆರ್ ಆಸ್ತಿ ಮೌಲ್ಯದಲ್ಲಿ ಸುಮಾರು 5.5 ಕೋಟಿ ರೂಗಳ ಆಸ್ತಿ ಮೌಲ್ಯ ಹೆಚ್ಚಾಗಿದ್ದು, ಅವರ ಬಳಿ ಒಟ್ಟು 22.61 ಕೋಟಿ ರೂ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳಿವೆಯಂತೆ. 2014ರಲ್ಲಿ ಅವರು 15.95 ಕೋಟಿ ರೂಗಳ ಆಸ್ತಿ ಘೋಷಣೆ ಮಾಡಿದ್ದರು.
ಇಷ್ಟೆಲ್ಲಾ ಇದ್ದರೂ ತೆಲಂಗಾಣ ಸಿಎಂ ಬಳಿ ಸ್ವಂತಕ್ಕೊಂದು ಕಾರು ಇಲ್ಲವಂತೆ. ಅಚ್ಚರಿ ಎಂದರೆ ಅವರ ಪಕ್ಷದ ಚಿನ್ಹೆ ಕೂಡ ಕಾರೇ ಆಗಿದೆ. ಅಂತೆಯೇ ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟ ನಿಮಿತ್ತ ಅವರು ನಡೆಸಿದ್ದ ಪ್ರತಿಭಟನೆಗಳಿಂದಾಗಿ ಕೆಸಿಆರ್ ಮೇಲೆ ಒಟ್ಟು 64 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆಯಂತೆ. ಇಂದೀಗ ಆ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video