ಚಿದಂಬರಂ 
ದೇಶ

ಆರ್ ಬಿಐ ಮೀಸಲು ಹಣದ ಮೇಲೆ ಕೇಂದ್ರ ಸರ್ಕಾರದ ಕಣ್ಣು- ಚಿದಂಬರಂ

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿರುವ 9 ಲಕ್ಷ ಕೋಟಿ ರೂಪಾಯಿ ಮೀಸಲು ಹಣದ ಮೇಲೆ ಕೇಂದ್ರಸರ್ಕಾರ ಕಣ್ಣಿಟ್ಟಿದ್ದು, ಆರ್ ಬಿಐಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಆರೋಪಿಸಿದ್ದಾರೆ.

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿರುವ 9 ಲಕ್ಷ ಕೋಟಿ ರೂಪಾಯಿ ಮೀಸಲು ಹಣದ ಮೇಲೆ  ಕೇಂದ್ರಸರ್ಕಾರ ಕಣ್ಣಿಟ್ಟಿದ್ದು, ಆರ್ ಬಿಐಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ  ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಆರೋಪಿಸಿದ್ದಾರೆ.

 ಆರ್ ಬಿಐ  ಆಡಳಿತ ಮಂಡಳಿ ಸಭೆ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಮಾಜಿ ಹಣಕಾಸು ಸಚಿವರೂ ಆದ ಚಿದಂಬರಂ, ಸೋಮವಾರ ನಡೆಯಲಿರುವ ಸಭೆಯಲ್ಲಿ ಆರ್ ಬಿಐ ಮತ್ತು ಕೇಂದ್ರಸರ್ಕಾರ ಪರಸ್ಪರ ಹೊಡೆದಾಡಿಕೊಳ್ಳಲಿವೆ ಎಂದು ಹೇಳಿದ್ದಾರೆ.

ಆರ್ ಬಿಐ ಸಭೆಯು ಕೇಂದ್ರ ಬ್ಯಾಂಕಿನ ಸ್ವಾಯತ್ತತೆ ಹಾಗೂ ಭಾರತದ ಆರ್ಥಿಕತೆ ನಡುವಣ ಲೆಕ್ಕ ಪರಿಶೋಧನೆ ಮಾಡುವ ದಿನವಾಗಿದೆ. ಇನ್ನು ಮುಂದೆ ಜಗತ್ತಿನಲ್ಲಿ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿ ನಿರ್ವಹಿಸುವ ಕಂಪನಿಯಾಗಲಿದೆ. ಖಾಸಗಿ ಉದ್ಯಮಿಗಳು, ಆರ್ ಬಿಐ ಗೌರ್ನರ್ ಗೆ ನೀಡುವ ಸಲಹೆ ಸೂಚನೆ ನಿರ್ದೇಶನಗಳಂತೆ ನಡೆಯುವ ಸಂಸ್ಥೆಯಾಗಿ ಪರಿವರ್ತನೆಯಾಗಲಿದೆ ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.

9.53 ಲಕ್ಷ ಕೋಟಿ ರೂ.ಗಳಷ್ಟು ಮೀಸಲು ಹಣವನ್ನು ಆರ್ ಬಿಐ ಹೊಂದಿದೆ. ಈಗ ಬರುತ್ತಿರುವ ವರದಿಗಳನ್ನೇ ನಂಬುವುದಾದರೆ, ನಿಯಮಾವಳಿಗಳನ್ನು ಸಡಿಲಿಸುವ ಮೂಲಕ ಮೀಸಲು ಹಣದ ಪ್ರಮಾಣ ಕ್ಷೀಣಿಸುವಂತೆ ಮಾಡಿದರೆ  ಕೇಂದ್ರ ಬ್ಯಾಂಕ್ ದುರ್ಬಲವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆರ್ ಬಿಐನ 3.6 ಲಕ್ಷ ಕೋಟಿ ರೂ. ಮೀಸಲು ಹಣವನ್ನು  ಕೇಂದ್ರಕ್ಕೆ ನೀಡಬೇಕೆಂಬ ಯಾವುದೇ ಪ್ರಸ್ತಾವನೆ ಇಲ್ಲ. ಅದೆಲ್ಲ ಕೇವಲ ಊಹಾಪೋಹವಷ್ಟೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಈಗಾಗಲೇ ಸ್ಪಷ್ಪಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT