ದೇಶ

ಹೆಸರು ಬದಲಾವಣೆ: ಈಗ ಹೈಕೋರ್ಟ್ ಗಳ ಸರದಿ, ಸಂಸತ್ ನಲ್ಲಿ ಹೊಸ ಮಸೂದೆ ಮಂಡನೆಗೆ ತಯಾರಿ!

Srinivas Rao BV
ನಗರಗಳ ಹೆಸರನ್ನು ಬದಲಾವಣೆ ಮಾಡುತ್ತಿರುವ ಟ್ರೆಂಡ್ ಮುಂದುವರೆದಿದ್ದು, ಈಗ ಹೈಕೋರ್ಟ್  ಗಳ ಹೆಸರನ್ನೂ ಬದಲಾವಣೆ ಮಾಡುವುದಕ್ಕೆ ಸಂಸತ್ ನಲ್ಲಿ ಹೊಸ ಮಸೂದೆ ಮಂಡನೆಗೆ ತಯಾರಿ ನಡೆಸಲಾಗುತ್ತಿದೆ. 
ಬಾಂಬೆ, ಕಲ್ಕತ್ತಾ ಹಾಗೂ ಮದ್ರಾಸ್ ಹೈಕೋರ್ಟ್ ಗಳ ಹೆಸರು ಬದಲಾವಣೆಯ ಪ್ರಸ್ತಾವನೆ ಮುಂದಿದ್ದು, ಹೊಸ ಮಸೂದೆ ಮಂಡನೆ ಅಗತ್ಯವಾಗಿದೆ. 
ದಿ ಹೈಕೋರ್ಟ್( ಹೆಸರು ಬದಲಾವಣೆ ಕಾಯ್ದೆ) 2016 ನ್ನು ಜುಲೈ 2016 ರಲ್ಲಿ ಮಂಡಿಸಲಾಗಿತ್ತು. ಈ ಮಸೂದೆಯ ಪ್ರಕಾರ ಕಲ್ಕತ್ತಾ, ಮದ್ರಾಸ್ ಹಾಗೂ ಬಾಂಬೆ,  ಹೈಕೋರ್ಟ್ ಗಳಿಗೆ ಅನುಕ್ರಮವಾಗಿ ಕೋಲ್ಕತ್ತಾ, ಚೆನ್ನೈ, ಮುಂಬೈ ಹೈಕೋರ್ಟ್ ಗಳೆಂದು ಮರು ನಾಮಕರಣ ಮಾಡಬೇಕೆಂಬ ಪ್ರಸ್ತಾವನೆ ನೀಡಲಾಗಿತ್ತು. 
ಪಶ್ಚಿಮ ಬಂಗಾಳ ಸರ್ಕಾರ ಕಲ್ಕತ್ತಾ ಹೈಕೋರ್ಟ್ ಹೆಸರನ್ನು ಕೋಲ್ಕತ ಹೈಕೋರ್ಟ್ ಎಂದು ಮರು ನಾಮಕರಣ ಮಾಡಲು ಬಯಸುತ್ತಿದೆ. ಆದರೆ ಕಲ್ಕತ್ತಾ ಹೈಕೋರ್ಟ್ ಸ್ವತಃ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.  ಈ ಬಗ್ಗೆ ಮಾತನಾಡಿರುವ ಕಾನೂನು ಸಚಿವಾಲಯದ ಅಧಿಕಾರಿಯೊಬ್ಬರು ಹೈಕೋರ್ಟ್ ಗಳಿಗೆ ಹೆಸರು ಬದಲಾವಣೆ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆಯೂ ಈ ವರೆಗೆ ನಡೆದಿಲ್ಲ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಲಿದೆ ಎಂದು ಹೇಳಿದ್ದಾರೆ. 
SCROLL FOR NEXT