ಸಂಗ್ರಹ ಚಿತ್ರ 
ದೇಶ

ಶಬರಿಮಲೆ: ಹಿಂದೂ ಸಂಘಟನೆ ನಾಯಕಿಗೆ ಅಯ್ಯಪ್ಪ ದರ್ಶನಕ್ಕೆ ಪೊಲೀಸರಿಂದ ಅನುವು, 6 ಗಂಟೆ ಕಾಲಾವಕಾಶ!

ಅಯ್ಯಪ್ಪ ದರ್ಶನಕ್ಕೆ ತೆರಳುವಾಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ...

ತಿರುವನಂತಪುರಂ: ಅಯ್ಯಪ್ಪ ದರ್ಶನಕ್ಕೆ ತೆರಳುವಾಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ ಕೆಪಿ ಶಶಿಕಲಾ ಅವರಿಗೆ ಅಯ್ಯಪ್ಪ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.
ಹಿಂದೂಪರ ನಾಯಕರು ಮತ್ತು ಅಯ್ಯಪ್ಪ ಭಕ್ತರ ಬಂಧನ ವಿರೋಧಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿರುವಂತೆಯೇ ಇತ್ತ ಕೇರಳ ಪೊಲೀಸರು ತಮ್ಮ ವಶದಲ್ಲಿದ್ದ ಹಿಂದೂ ಪರ ನಾಯಕಿ ಮತ್ತು ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ ಕೆಪಿ ಶಶಿಕಲಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಅವರ ಅಯ್ಯಪ್ಪ ದರ್ಶನಕ್ಕೆ 6 ಗಂಟೆಗಳ ಕಾಲಾವಕಾಶ ನೀಡಿದ್ದು, 6 ಗಂಟೆಗಳೊಳಗೆ ಸನ್ನಿಧಾನಂ ಪ್ರವೇಶ ಮತ್ತು ಅಯ್ಯಪ್ಪ ಸ್ವಾಮಿ ದರ್ಶನ ಮಾಡುವಂತೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ.
ಇನ್ನು ಪೊಲೀಸರ ಅನುಮತಿ ಪತ್ರವನ್ನು ಬಸ್ಸಿನಲ್ಲಿ ಕುಳಿದು ಶಶಿಕಲಾ ಅವರು ಮಾಧ್ಯಮಗಳಿಗೆ ಪ್ರದರ್ಶನ ಮಾಡಿದರು. ಶಶಿಕಲಾ ಅವರೊಂದಿಗೆ ಅವರ ಮೊಮ್ಮಗ ಕೂಡ ಸನ್ನಿಧಾನಂ ನತ್ತ ತೆರಳುತ್ತಿದ್ದು, ಸನ್ನಿಧಾನಂ ನಲ್ಲಿಯೇ ತಮ್ಮ ಮೊಮ್ಮಗನಿಗೆ ಶಶಿಕಲಾ ಅವರು ಅನ್ನಪ್ರಾಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದೇ ಕಾರಣಕ್ಕಾಗಿ ಪೊಲೀಸರು ಸನ್ನಿಧಾನಂನಲ್ಲಿ ಯಾವುದೇ ರೀತಿಯ ಅಹಿತಕ ಬೆಳವಣಿಗೆ ನಡೆಯದಿರಲಿ ಎಂದು ಶಶಿಕಲಾ ಅವರಿಗೆ 6 ಗಂಟೆ ಸಮಯಾವಕಾಶ ನೀಡಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT