ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಮುಕ್ತ ಪ್ರವೇಶ ಕಲ್ಪಿಸಿದ್ದ ಸುಪ್ರೀಂ ಕೋರ್ಟ್ ತೀರ್ಪು ಜಾರಿಗೊಳಿಸು ಸಮಯ ನೀಡಬೇಕು ಎಂದು ತಿರುವಾಂಕೂರು ದೇವಸಂ ಮಂಡಳಿಯ ಸರ್ವೋಚ್ಛ ನ್ಯಾಯಾಲಯಕ್ಕೆ ಸೋಮವಾರ ಮನವಿ ಮಾಡಿದೆ.
ಹಿಂದೂಪರ ನಾಯಕರು ಮತ್ತು ಅಯ್ಯಪ್ಪ ಭಕ್ತರ ಬಂಧನ ವಿರೋಧಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿರುವಂತೆಯೇ ಇತ್ತ ಕೇರಳ ಪೊಲೀಸರು ತಮ್ಮ ವಶದಲ್ಲಿದ್ದ ಹಿಂದೂ ಪರ ನಾಯಕಿ ಮತ್ತು ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ ಕೆಪಿ ಶಶಿಕಲಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಅವರ ಅಯ್ಯಪ್ಪ ದರ್ಶನಕ್ಕೆ 6 ಗಂಟೆಗಳ ಕಾಲಾವಕಾಶ ನೀಡಿದ್ದು, 6 ಗಂಟೆಗಳೊಳಗೆ ಸನ್ನಿಧಾನಂ ಪ್ರವೇಶ ಮತ್ತು ಅಯ್ಯಪ್ಪ ಸ್ವಾಮಿ ದರ್ಶನ ಮಾಡುವಂತೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ.
ಇನ್ನು ಪೊಲೀಸರ ಅನುಮತಿ ಪತ್ರವನ್ನು ಬಸ್ಸಿನಲ್ಲಿ ಕುಳಿದು ಶಶಿಕಲಾ ಅವರು ಮಾಧ್ಯಮಗಳಿಗೆ ಪ್ರದರ್ಶನ ಮಾಡಿದರು. ಶಶಿಕಲಾ ಅವರೊಂದಿಗೆ ಅವರ ಮೊಮ್ಮಗ ಕೂಡ ಸನ್ನಿಧಾನಂ ನತ್ತ ತೆರಳುತ್ತಿದ್ದು, ಸನ್ನಿಧಾನಂ ನಲ್ಲಿಯೇ ತಮ್ಮ ಮೊಮ್ಮಗನಿಗೆ ಶಶಿಕಲಾ ಅವರು ಅನ್ನಪ್ರಾಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದೇ ಕಾರಣಕ್ಕಾಗಿ ಪೊಲೀಸರು ಸನ್ನಿಧಾನಂನಲ್ಲಿ ಯಾವುದೇ ರೀತಿಯ ಅಹಿತಕ ಬೆಳವಣಿಗೆ ನಡೆಯದಿರಲಿ ಎಂದು ಶಶಿಕಲಾ ಅವರಿಗೆ 6 ಗಂಟೆ ಸಮಯಾವಕಾಶ ನೀಡಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಪೊಲೀಸರ ಕ್ರಮವನ್ನು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಸಮರ್ಥಿಸಿಕೊಂಡಿದ್ದು, ಸಮಸ್ಯೆ ಸೃಷ್ಟಿಸುತ್ತಿರುವವರು ಅಯ್ಯಪ್ಪ ಭಕ್ತರಲ್ಲ. ಆರ್ ಎಸ್ ಎಸ್ ಕಾರ್ಯಕರ್ತರು ಎಂದು ಆರೋಪಿಸಿದ್ದಾರೆ.