ದೇಶ

ಛತ್ತೀಸ್ ಗಡ 2ನೇ ಹಂತದ ಚುನಾವಣೆ: ಸಂಜೆ 6ರ ವೇಳೆಗೆ ದಾಖಲೆಯ ಶೇ. 71. 93ರಷ್ಟು ಮತದಾನ

Nagaraja AB

ರಾಯ್ ಪುರ: ಛತ್ತೀಸ್ ಗಡ ವಿಧಾನಸಭೆಯ ಎರಡನೇ ಹಂತದ ಮತದಾನದಲ್ಲಿ  ಸಂಜೆ 6 ಗಂಟೆ ವೇಳೆಗೆ  ದಾಖಲೆ ಪ್ರಮಾಣದಲ್ಲಿ ಶೇ. 71. 93 ರಷ್ಟು ಮತದಾನವಾಗಿದೆ. ಕೆಲವು ಮತಗಟ್ಟೆಗಳಲ್ಲಿ ಇನ್ನೂ ಮತದಾನ ಮುಂದುವರೆದಿದೆ ಎಂದು ತಿಳಿದುಬಂದಿದೆ.

72 ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದ ಚುನಾವಣೆಯಲ್ಲಿ 119 ಮಹಿಳೆಯರು ಸೇರಿದಂತೆ ಒಟ್ಟಾರೇ 1, 079 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರ ರಾಜಕೀಯ ಭವಿಷ್ಯವನ್ನು 1, 54, 00, 596 ಮತದಾರರು ಮತಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದಾರೆ.

ನಕ್ಸಲ್ ಪೀಡಿತ  8 ಜಿಲ್ಲೆಗಳಲ್ಲಿ 18 ಕ್ಷೇತ್ರಗಳಿಗೆ ಕಳೆದ ವಾರ ನಡೆದಿದ್ದ ಚುನಾವಣೆಯಲ್ಲಿ ಶೇ. 76 ರಷ್ಟು ಮತದಾನವಾಗಿತ್ತು.

ಬೆಳಗ್ಗೆಯಿಂದಲೂ ಮಂದಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ನಂತರ ಚುರುಕುಪಡೆದುಕೊಂಡಿತು. ಮಧ್ಯಾಹ್ನ 12-30ರ ವೇಳೆಗೆ ಶೇ. 25. 2 ರಷ್ಟು ಹಾಗೂ ಸಂಜೆ 5 ಗಂಟೆಯ ವೇಳೆಗೆ ಶೇ. 64.8 ರಷ್ಟು ಮತದಾನವಾಗಿತ್ತು.  

ಛತ್ತೀಸ್ ಗಡ ವಿಧಾನಸಭೆ 90  ಸದಸ್ಯರನ್ನು ಹೊಂದಿದ್ದು, ಕಳೆದ 15 ವರ್ಷಗಳಿಂದಲೂ ಇಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ.

SCROLL FOR NEXT