ದೇಶ

ಚೀನಾ ಮಹಾಗೋಡೆಯಂತಹ ಬೃಹತ್ ಯೋಜನೆಗೆ ಕೈ ಹಾಕಿದ ಭಾರತೀಯ ರೈಲ್ವೆ!

Vishwanath S
ನವದೆಹಲಿ: ದೀಪಾವಳಿಯಂದು ರಾವಣ ಪ್ರತಿಕೃತಿ ದಹನದ ವೇಳೆ ಅಮೃತಸರದಲ್ಲಿ ರೈಲಿಗೆ ಸಿಲುಕಿ ನೂರಾರು ಮಂದಿ ಮೃತಪಟ್ಟಿದ್ದು ಈ ಅವಘಡ ನಂತರ ಎಚ್ಚೆತ್ತಿರುವ ಭಾರತೀಯ ರೈಲ್ವೆ ಇಲಾಖೆ ಬೃಹತ್ ಯೋಜನೆಯೊಂದಕ್ಕೆ ಮುಂದಾಗಿದೆ. 
ಅಪಘಾತ-ತಡೆಗಟ್ಟುವಿಕೆ ವ್ಯವಸ್ಥೆ ನವೀಕರಣ, ರೈಲ್ವೆ ಮಾರ್ಗದಲ್ಲಿ ಅತಿಕ್ರಮ ಪ್ರವೇಶ ತಡೆ, ಚಲಿಸುತ್ತಿರುವ ರೈಲಿನ ಅತಿಕ್ರಮ ನಿಲುಗಡೆ ತಪ್ಪಿಸಿ ಪ್ರಯಾಣಿಕರ ಸ್ನೇಹಿ ಮಾರ್ಗವನ್ನಾಗಿ ರೂಪಿಸಿ ಅವುಗಳ ವೇಗ ವೃದ್ಧಿಸಲು ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿರುವುದಾಗಿ ಭಾರತೀಯ ರೈಲ್ವೆ ಮಂಡಳಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
2019ರ ಡಿಸೆಂಬರ್ ವೇಳೆಗೆ ನಿಗದಿಪಡಿಸಿರುವ ಮಾರ್ಗದ ರೈಲ್ವೆ ಹಳಿಯ ಎರಡೂ ಬದಿಗಳಲ್ಲಿ 3,300 ಕಿಮೀ ಉದ್ದದ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದಕ್ಕೆ ಸುಮಾರು 3 ಸಾವಿರ ಕೋಟಿ ರುಪಾಯಿ ವಿನಿಯೋಗಿಸಲಾಗುತ್ತಿದೆ.
SCROLL FOR NEXT