ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಸಿಪಿ ಜೋಷಿಯವರ ಹೇಳಿಕೆ ಕುರಿತಂತೆ ಮೌನ ಮುರಿದು ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಜೋಷಿಯವರ ಹೇಳಿಕೆ ಕಾಂಗ್ರೆಸ್ ಪಕ್ಷದ ಆದರ್ಶಗಳಿಗೆ ವಿರುದ್ಧವಾದದ್ದು ಎಂದು ಶುಕ್ರವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸಿಪಿ ಜೋಷಿಯವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿಯವರು, ಜೋಷಿಯವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ಆದರ್ಶಗಳು ಹಾಗೂ ಚಿಂತನೆಗಳಿಗೆ ಹೋಲಿಕೆ ಮಾಡಬಾರದು. ಯಾವುದೇ ಸಮುದಾಯ ಭಾವನೆಗಳಿಗೆ ನೋವಾಗುವಂತಹ ಹೇಳಿಕೆಯನ್ನು ಪಕ್ಷದ ನಾಯಕರು ನೀಡಬಾರದು ಎಂದು ಹೇಳಿದ್ದಾರೆ.
ಪಕ್ಷದ ತತ್ವಗಳು ಹಾಗೂ ಕಾರ್ಯಕರ್ತರ ಸ್ಥೈರ್ಯಕ್ಕೆ ಗೌರವ ನೀಡಿ, ಜೋಷಿಯವರು ತಮ್ಮ ತಪ್ಪನ್ನು ಅರಿತುಕೊಳ್ಳಬೇಕು. ಹೇಳಿಕೆ ಕುರಿತಂತೆ ಜೋಷಿಯವರು ಕೂಡಲೇ ವಿಷಾದ ವ್ಯಕ್ತಪಡಿಸಬೇಕೆಂದು ತಿಳಿಸಿದ್ದಾರೆ.